ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ತಡೆಗೆ ಹೊರಗಿನಿಂದ ಬಂದ ವ್ಯಕಿಗಳ ಸರ್ವೆ.. - lockdown effect

ಲಾಕ್‌ಡೌನ್ ಆದೇಶದ ನಂತರ ಬೆಂಗಳೂರು ಸೇರಿ ದೇಶದೆಲ್ಲೆಯ ವಿವಿಧ ಭಾಗಗಳಿಂದ ಆನೇಕರು ತಮ್ಮ ಸ್ವಗ್ರಾಮಕ್ಕೆ ಬಂದಿದ್ದಾರೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆಂತಕ ಸೃಷ್ಟಿಯಾಗಿತ್ತು.

Survey in Harihara to check Corona virus suspection
ಕೊರೊನಾ ವೈರಸ್ ಹರಡದಂತೆ ಹೊರಗಿನಿಂದ ಬಂದ ವ್ಯಕಿಗಳ ಸರ್ವೆ

By

Published : Mar 28, 2020, 11:37 PM IST

ಹರಿಹರ :ಕೊರೊನಾ ವೈರಸ್ ಹರಡದಂತೆ ಆರೋಗ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಹೊರಗಿನಿಂದ ಬಂದ ವ್ಯಕಿಗಳ ಬಗ್ಗೆ ಸರ್ವೆ ಮಾಡಲಾಯಿತು.

ಲಾಕ್‌ಡೌನ್ ಆದೇಶದ ನಂತರ ಬೆಂಗಳೂರು ಸೇರಿ ದೇಶದೆಲ್ಲೆಯ ವಿವಿಧ ಭಾಗಗಳಿಂದ ಆನೇಕರು ತಮ್ಮ ಸ್ವಗ್ರಾಮಕ್ಕೆ ಬಂದಿದ್ದಾರೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆಂತಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ಮನೆಗಳಿಗೂ ಭೇಟಿ ನೀಡಿ ಮಾಹಿತಿ ಪಡೆದು ಸೋಂಕು ಇಲ್ಲದಿದ್ದರೂ ಕನಿಷ್ಠ 14 ದಿನ ಹೋಮ್ ಕ್ವಾರಂಟೈನ್‌ನಲ್ಲಿರಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

ಗ್ರಾಮಸ್ಥರು ಅನಾವಶ್ಯಕವಾಗಿ ಭಯಪಡುವ ಆಗತ್ಯವಿಲ್ಲ. ಕೊರೊನಾ ವೈರಸ್ ಹರಡದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ABOUT THE AUTHOR

...view details