ಸೂಳೆಕೆರೆ ಭರ್ತಿಗೊಳಿಸಿದ ಮಳೆರಾಯ... ಅನ್ನದಾತನ ಮೊಗದಲ್ಲಿ ಸಂತಸ - Davanagere news, DAvanagere Sulekere
ಏಷ್ಯಾದಲ್ಲೇ 2 ನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರ ಆಗಿರುವ ಸೂಳೆಕೆರೆಗೆ ಭದ್ರಾ ಜಲಾಶಯದಿಂದಲೂ ನೀರು ಬಿಡಲಾಗಿದೆ. ಹಳ್ಳ ಕೊಳ್ಳಗಳಿಂದಲೂ ಯಥೇಚ್ಛವಾಗಿ ನೀರು ಬಂದ ಕಾರಣ ಸೂಳೆಕೆರೆ ಭರ್ತಿಯಾಗಿದೆ.
ಕೆರೆ
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸೂಳೆಕೆರೆ ಭರ್ತಿಯಾಗಿದ್ದು, ರೈತಾಪಿ ವರ್ಗ ಹರ್ಷಗೊಂಡಿದೆ.
ಕಳೆದ ನಾಲ್ಕೈದು ದಿನಗಳಿಂದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆಗೆ ಅಪಾರ ನೀರು ಹರಿದು ಬರುತ್ತಿದೆ. ಕಳೆದ ಹಲವು ವರ್ಷಗಳಿಂದ ಕೆರೆ ಭರ್ತಿಯಾಗಿರಲಿಲ್ಲ. ಈ ಬಾರಿ ಮಳೆ ಆರ್ಭಟಕ್ಕೆ ಕೆರೆ ಮೈದುಂಬಿ ಹರಿಯುತ್ತಿರುವುದು ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ.