ಕರ್ನಾಟಕ

karnataka

ದಾವಣಗೆರೆಗೆ ಕಾಲಿಟ್ಟ ಹಿಜಾಬ್ - ಕೇಸರಿ ಶಾಲು ವಿವಾದ: ಏನ್ ಹೇಳ್ತಿದ್ದಾರೆ ಗೊತ್ತಾ ಮುಸ್ಲಿಂ ವಿದ್ಯಾರ್ಥಿಗಳು..

By

Published : Feb 7, 2022, 3:45 PM IST

ನಾಳೆ ಹೈಕೋರ್ಟ್ ಏನೇ ತೀರ್ಪು ಕೊಟ್ಟರೂ ನಾವು ಮಾತ್ರ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

students-spoke-about-hijab-saffron-shawl-row-in-davanagere
ವಿದ್ಯಾರ್ಥಿಗಳು

ದಾವಣಗೆರೆ:ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಹಿಜಾಬ್ ಕೇಸರಿ ಶಾಲು ವಿವಾದ ಇದೀಗ ದಾವಣಗೆರೆಗೂ ಕಾಲಿಟ್ಟಿದೆ.

ಹಿಜಾಬ್- ಕೇಸರಿ ಶಾಲು ವಿವಾದ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹೀಸ್ ಫಂಡಮೆಂಟಲ್ ರೈಟ್ಸ್ ಎಂದಿದ್ದಾರೆ. 55 ಮುಸ್ಲಿಂ ಹೆಣ್ಣು ಮಕ್ಕಳು ಕಾಲೇಜಿನಲ್ಲಿದ್ದು, ಎಲ್ಲ ಮಕ್ಕಳು ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದು, ಇತ್ತ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸುತ್ತಿರುವುದು ಕಾಲೇಜಿನ ಸಿಬ್ಬಂದಿಗೆ ತಲೆಬಿಸಿಯಾಗಿ ಪರಿಣಮಿಸಿದೆ.

ನಾಳೆ ಹೈಕೋರ್ಟ್ ಏನೇ ತೀರ್ಪು ಕೊಟ್ಟರು ನಾವು ಮಾತ್ರ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ಓದಿ:ಕಾಲೇಜು ಆವರಣದಲ್ಲಿ ಹಿಜಾಬ್, ಕೇಸರಿ ಶಾಲು ನಡೆಯಲ್ಲ: ಆರಗ ಜ್ಞಾನೇಂದ್ರ

For All Latest Updates

TAGGED:

ABOUT THE AUTHOR

...view details