ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಮಕ್ಕೆ ಬಸ್ ಬಿಡಲಾಗುವುದು ಎಂದು ತಹಶೀಲ್ದಾರ್ ಹೇಳಿದರಾದೂ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಅಣಬೂರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಸ್ ಬಿಡುವುದಾಗಿ ಹೇಳಿ ಮಾತಿಗೆ ತಪ್ಪಿದ ತಹಶೀಲ್ದಾರ್: ವಿದ್ಯಾರ್ಥಿಗಳ ಆಕ್ರೋಶ
ಕಳೆದ ಗುರುವಾರ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ತಡೆದು, ಗ್ರಾಮಕ್ಕೆ ಬಸ್ ಬಿಡವಂತೆ ಆಗ್ರಹಿಸಿದ್ದರು. ಈ ಮನವಿಗೆ ಸ್ಪಂದಿಸಿದ್ದ ತಹಶೀಲ್ದಾರ್, ಮೂರು ದಿನದ ಒಳಗಾಗಿ ಬಸ್ ಬಿಡುವುದಾಗಿ ಭರವಸೆ ನೀಡಿದ್ದರು, ಆದರೆ, ಮೂರು ದಿನ ಕಳೆದರೂ ಈ ಬಗ್ಗೆ ಚಕಾರ ಎತ್ತಿಲ್ಲವಾದ್ದರಿಂದ ವಿದ್ಯಾರ್ಥಿಗಳು ಮತ್ತೇ ಪ್ರತಿಭಟನೆ ನಡೆಸಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶ
ಕಳೆದ ಗುರುವಾರ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ತಡೆದು, ಗ್ರಾಮಕ್ಕೆ ಬಸ್ ಬಿಡವಂತೆ ಆಗ್ರಹಿಸಿದ್ದರು. ಈ ಮನವಿಗೆ ಸ್ಪಂದಿಸಿದ್ದ ತಹಶೀಲ್ದಾರ್, ಮೂರು ದಿನದ ಒಳಗಾಗಿ ಬಸ್ ಬಿಡುವುದಾಗಿ ಭರವಸೆ ನೀಡಿದ್ದರು, ಆದರೆ, ಮೂರು ದಿನ ಕಳೆದರೂ ಈ ಬಗ್ಗೆ ಚಕಾರ ಎತ್ತಿಲ್ಲ ಎಂದು ದೂರಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜೊತೆಗೆ ಜಗಳೂರು ಮಾರ್ಗದ ಬಸ್ಗಳನ್ನು ತಡೆದು ಆಕ್ರೋಶ ಹೊರಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ನಾಳೆಯಿಂದ ಬಸ್ ಬಿಡುವುದಾಗಿ ಮತ್ತೆ ಭರವಸೆ ನೀಡಿದ್ದಾರೆ.