ಕರ್ನಾಟಕ

karnataka

ETV Bharat / state

ಮನೆಯಲ್ಲಿ ಬಡತನ.. ಪದವಿ ಶಿಕ್ಷಣಕ್ಕೆ ನಿರಾಕರಿಸಿದ್ದಕ್ಕೆ ಪ್ರತಿಭಾನ್ವಿತ ವಿದ್ಯಾರ್ಥಿನಿ ಆತ್ಮಹತ್ಯೆ - Jagaluru Taluk

ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಪದವಿ ಶಿಕ್ಷಣಕ್ಕೆ ಮನೆಯವರು ನಿರಾಕರಣೆ ಮಾಡಿದ್ದಾರೆ ಎಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Student Committed Suicide
ವಿದ್ಯಾರ್ಥಿನಿ ಆತ್ಮಹತ್ಯೆ

By

Published : Aug 8, 2021, 10:37 AM IST

ದಾವಣಗೆರೆ : ಮನೆಯಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ನಿರಾಕರಿಸಿದರೆಂದು ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪವಡೆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಕ್ಷಿತಾ (19) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಉಜ್ಜಪ್ಪವಡೆಯರಹಳ್ಳಿಯ ನಿವಾಸಿಗಳಾದ ಚಂದ್ರಮ್ಮ ಹಾಗು ನಾಗರಾಜ್ ದಂಪತಿಯ ಪುತ್ರಿ ರಕ್ಷಿತಾ, ದಾವಣಗೆರೆ ನಗರದ ಸೀತಮ್ಮ ಪಿಯು ಕಾಲೇಜ್ ನಲ್ಲಿ ಪಿಯುಸಿ ಮುಗಿಸಿದ್ದಳು.

ಓದಿ : ಬೆಂಗಳೂರಲ್ಲಿ ಕಾರು ಚಾಲಕನಿಂದ ಸರಣಿ ಅಪಘಾತ : ಇಬ್ಬರು ಬೈಕ್​ ಸವಾರರು ಸಾವು

ಕಳೆದ ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ರಕ್ಷಿತಾ, ಪದವಿ ಕಾಲೇಜಿಗೆ ಸೇರುವ ನಿರೀಕ್ಷೆಯಲ್ಲಿದ್ದಳು. ತಂದೆ ಮೃತರಾಗಿದ್ದ ಹಿನ್ನೆಲೆ, ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ತಾಯಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಮನೆಯಲ್ಲಿ ಬಡತನ ಇರುವ ಕಾರಣ ತಾಯಿ ಚಂದ್ರಮ್ಮ ರಕ್ಷಿತಾಳಿಗೆ ಪದವಿ ಶಿಕ್ಷಣಕ್ಕೆ ನಿರಾಕರಿಸಿದ್ದಳು ಎನ್ನಲಾಗ್ತಿದೆ. ಇದರಿಂದ‌ ಬೇಸರಗೊಂಡ ವಿದ್ಯಾರ್ಥಿನಿ ರಕ್ಷಿತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.‌

ಘಟನಾ ಸ್ಥಳಕ್ಕೆ ಬೀಳಚೋಡು ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details