ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್ ಬಳಕೆ ಬೇಡ: ದಾವಣಗೆರೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ - ದಾವಣಗೆರೆ ಸುದ್ದಿ

ದಾವಣಗೆರೆ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ದಾವಣಗೆರೆ ಮಹಾನಗರ ಪಾಲಿಕೆ

By

Published : Oct 24, 2019, 10:43 AM IST

ದಾವಣಗೆರೆ:ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನದಂತೆ, ದಾವಣಗೆರೆ ಪಾಲಿಕೆ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ಇತ್ಯಾದಿಗಳನ್ನು ಪ್ಲಾಸ್ಟಿಕ್​ನಿಂದ ತಯಾರಿಸಬಾರದು ಎಂದು ನಗರದ ಎಲ್ಲಾ ಫ್ಲೆಕ್ಸ್‌ ಅಂಗಡಿಗಳಿಗೆ ನೋಟಿಸ್ ಜಾರಿ‌ ಮಾಡಿದೆ.‌

ದಾವಣಗೆರೆ ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ

ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ಕರ್ನಾಟಕ ಸರ್ಕಾರ ರಾಜ್ಯಪತ್ರದಲ್ಲಿ ಪ್ಲಾಸ್ಟಿಕ್​ನಿಂದ ತಯಾರು ಮಾಡುವ ವಸ್ತುಗಳನ್ನು ನಿಷೇಧಿಸಿದೆ. ಅದ್ರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್​ನಿಂದ ತಯಾರಿಸಿದ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ಇತ್ಯಾದಿ ಬಳಸಕೂಡದು. ನಿಯಮ ಮೀರಿದ್ದಲ್ಲಿ ದಂಡ ವಿಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ನೋಟಿಸ್ ನೀಡಿದೆ.

ಪಾಲಿಕೆ ನೋಟಿಸ್ ಹಿನ್ನಲೆ, ಈಗಾಗಲೇ ದಾವಣಗೆರೆಯ ಎಲ್ಲಾ ಫ್ಲೆಕ್ಸ್‌ ಅಂಗಡಿಗಳು ಬಟ್ಟೆಯ ಬ್ಯಾನರ್​ ಹಾಗು ಇತ್ಯಾದಿ ಪರಿಕರಗಳನ್ನು ತಯಾರಿಸುತ್ತಿವೆ.

ABOUT THE AUTHOR

...view details