ಹರಿಹರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ಜಾನಪದ ಕಲಾತಂಡದಿಂದ, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಬೀದಿ ನಾಟಕ, ಜಾನಪದ ಗೀತೆಗಳ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿ ಮಾಡಿಸಲಾಯಿತು.
ಕೊಂಡಜ್ಜಿಯಲ್ಲಿ ಬೀದಿ ನಾಟಕ: ಜಾನಪದ ಗೀತೆಗಳ ಮೂಲಕ ಜನರಲ್ಲಿ ಜಾಗೃತಿ
ಗ್ರಾಮದ ತೇರಿನ ಮನೆ ವೃತ್ತದ ಜನನಿಬಿಡ ಪ್ರದೇಶದಲ್ಲಿ, ಕಲಾ ತಂಡದ ಸದಸ್ಯರು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಶಿಶುವಿನ ಆರೈಕೆ, ತಾಯಿ ಕಾರ್ಡಿನ ಮಹತ್ವ, ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಮುಂತಾದ ಯೋಜನೆಗಳ ಬಗ್ಗೆ ಬೀದಿ ನಾಟಕ, ಜಾನಪದ ಗೀತೆ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮಾಡಿಸಿದರು.
ಕೊಂಡಜ್ಜಿಯಲ್ಲಿ ಬೀದಿ ನಾಟಕ
ಗ್ರಾಮದ ತೇರಿನ ಮನೆ ವೃತ್ತದ ಜನನಿಬಿಡ ಪ್ರದೇಶದಲ್ಲಿ ಕಲಾ ತಂಡದ ಸದಸ್ಯರು, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ಶಿಶುವಿನ ಆರೈಕೆ, ತಾಯಿ ಕಾರ್ಡಿನ ಮಹತ್ವ, ಪ್ರಧಾನ ಮಂತ್ರಿ ಮಾತೃತ್ವ ಅಭಿಯಾನ ಸೇರಿದಂತೆ ಮುಂತಾದ ಯೋಜನೆಗಳ ಬಗ್ಗೆ ಬೀದಿ ನಾಟಕ, ಜಾನಪದ ಗೀತೆ ಮೂಲಕ ಪರಿಣಾಮಕಾರಿಯಾಗಿ ಜಾಗೃತಿ ಮಾಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ವಿಜಯಗಟ್ಟಿ, ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆ ಮೂಲಕ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬಹುದು ಎಂದರು.