ದಾವಣಗೆರೆ:ಖಾಸಗಿ ಬ್ಯಾನರ್ ಅಡಿಯಲ್ಲಿ ಸರ್ಕಾರದ ವ್ಯಾಕ್ಸಿನ್ ಹಾಕಿಸುವುದು ಬೇಡ ಎಂದು ತಡೆದಿದ್ದು ಸತ್ಯ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದ್ದಾರೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನರು ಖಾಸಗಿಯಾಗಿ ನೀಡುತ್ತಿರುವ ವ್ಯಾಕ್ಸಿನ್ ಹಾಗು ಸರ್ಕಾರದ ವ್ಯಾಕ್ಸಿನ್ ಸೇರಿಸಿ ಒಂದೇ ಕಡೆ ನೀಡಿದ್ರೆ ಜನರಿಗೆ ಒಳಿತಾಗುತ್ತದೆ. ಅದನ್ನು ಬಿಟ್ಟು ಸಂಸದ ಅದರಲ್ಲೂ ರಾಜಕೀಯ ಮಾಡುತ್ತಿದ್ದಾನೆ ಎಂದಿದ್ದ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಅವರು ಹರಿಹಾಯ್ದರು.
ಅವರದ್ದೇ ಆದ ಖಾಸಗಿ ಬ್ಯಾನರ್ ಅಡಿಯಲ್ಲಿ ಸರ್ಕಾರದ ವ್ಯಾಕ್ಸಿನ್ ನೀಡಬೇಡಿ ಎಂದು ತಡೆದಿದ್ದು ಸತ್ಯ. ಖಾಸಗಿ ಬ್ಯಾನರ್ ಅಡಿಯಲ್ಲಿ ಸರ್ಕಾರಿ ವ್ಯಾಕ್ಸಿನ್ ಏಕೆ ಹಾಕಬೇಕು?, ಅದು ಸರ್ಕಾರಿ ವ್ಯಾಕ್ಸಿನ್ ಸರ್ಕಾರಿ ಬ್ಯಾನರ್ ಅಡಿಯಲ್ಲಿ ಹಾಕುತ್ತೇವೆ ಎಂದರು.