ಕರ್ನಾಟಕ

karnataka

ETV Bharat / state

ಇದೇ 8ರಂದು ಪರಿಶಿಷ್ಟ ಪಂಗಡಗಳ ರಾಜ್ಯಮಟ್ಟದ ನೌಕರರ ಸಮ್ಮೇಳನ - ಪರಿಶಿಷ್ಟ ಪಂಗಡಗಳ ಸಮ್ಮೇಳನ

ಹರಿಹರದಲ್ಲಿ ಇದೇ 8ರಂದು ಮಧ್ನಾಹ್ನ 3 ಗಂಟೆಗೆ ಪರಿಶಿಷ್ಟ ಪಂಗಡಗಳ ರಾಜ್ಯಮಟ್ಟದ ನೌಕರರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ನೌಕರರ ಸಮ್ಮೇಳನ
ನೌಕರರ ಸಮ್ಮೇಳನ

By

Published : Feb 7, 2020, 1:00 PM IST

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಇದೇ 8ರಂದು ಮಧ್ನಾಹ್ನ 3 ಗಂಟೆಗೆ ಪರಿಶಿಷ್ಟ ಪಂಗಡಗಳ ರಾಜ್ಯಮಟ್ಟದ ನೌಕರರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಸಿ ತಿಪ್ಪೇಸ್ವಾಮಿ‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಪರಿಶಿಷ್ಟ ಪಂಗಡಗಳ ರಾಜ್ಯಮಟ್ಟದ ನೌಕರರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ರಾಜ್ಯದ ಪರಿಶಿಷ್ಟ ಪಂಗಡಗಳ ನೌಕರರ ಪಾತ್ರ, ಸಮಸ್ಯೆಗಳು ಸೇರಿದಂತೆ ಇತ್ಯಾದಿಗಳ ಕುರಿತಂತೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. 2019 ರಲ್ಲಿ ನಿವೃತ್ತರಾದ ಅಧಿಕಾರಿಗಳು ಹಾಗೂ ನೌಕರರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ತಿಪ್ಪೆಸ್ವಾಮಿ

ಕಾರ್ಯಕ್ರಮ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಉದ್ಘಾಟಿಸಲಿದ್ದಾರೆ, ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹನುಮನರಸಯ್ಯ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವರು ಹಾಗೂ ಯಲ್ಲಪ್ಪ ಜಾಲಿಬೆಂಚಿ ಉಪನ್ಯಾಸ ನೀಡುವರು ಎಂದು ತಿಳಿಸಿದರು.

ABOUT THE AUTHOR

...view details