ದಾವಣಗೆರೆ: ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ಮಹಾಮಾರಿ ಕೊರೊನಾ ವಕ್ಕರಿಸಿದ ಹಿನ್ನೆಲೆ ಲಾಕ್ಡೌನ್ ಘೋಷಿಸಲಾಯಿತು. ಪರಿಣಾಮ ಶಾಲಾ-ಕಾಲೇಜು ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳು ಕೆಲ ದಿನಗಳ ಕಾಲ ಬಂದ್ ಆಗಿದ್ದವು. ಸದ್ಯ ಹಂತ-ಹಂತವಾಗಿ ಎಲ್ಲವೂ ಆರಂಭಗೊಂಡಿದ್ದು, ಪ್ರತೀ ಕ್ಷೇತ್ರಗಳು ಸುಧಾರಿಸಿಕೊಳ್ಳುತ್ತಿದೆ. ಕೊರೊನಾ-ಲಾಕ್ಡೌನ್ ಶಿಕ್ಷಣ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಶೈಕ್ಷಣಿಕ ವರ್ಷಗಳು ಮುಗಿಯುತ್ತಾ ಬಂದರೂ ಅನೇಕ ಕಡೆಗಳಲ್ಲಿ ಪಠ್ಯ ಪೂರ್ಣಗೊಂಡಿಲ್ಲ. ಇದರಿಂದ ಬೆಣ್ಣೆನಗರಿ ಕೂಡ ಹೊರತಾಗಿಲ್ಲ. ದಾವಣಗೆರೆ ಶೈಕ್ಷಣಿಕ ಕ್ಷೇತ್ರದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ..
ಕೊರೊನಾ ಹಾವಳಿಯ ನೇರ ಪರಿಣಾಮವೀಗ ಶಾಲಾ ಮಕ್ಕಳ ಪಠ್ಯದ ಮೇಲೆ ಬಿದ್ದಿದೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದ್ರು ಕೂಡ ಬೆಣ್ಣೆ ನಗರಿ ಶಾಲೆಗಳ ಪಠ್ಯವನ್ನು ಪೂರ್ಣಗೊಳಿಸಲು ಮಾತ್ರ ಸಾಧ್ಯವಾಗಿಲ್ಲ. ಹಾಗಾಗಿ ಇದೇ ಮೇ ತಿಂಗಳ ಕೊನೆ ತನಕ ಎಸ್ಎಸ್ಎಲ್ಸಿ ಮಕ್ಕಳಿಗೆ ತರಗತಿ ಕೈಗೊಂಡು ಪಠ್ಯವನ್ನು ಮುಕ್ತಾಯಗೊಳಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ.
ಶೇ.40 ರಷ್ಟು ಪಠ್ಯಕ್ರಮ ಪೂರ್ಣ:
ಹೌದು, ಕೊರೊನಾ ಭಯದಿಂದ ಕೆಲ ತಿಂಗಳುಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿತು. 9 ತಿಂಗಳ ಬಳಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿತು. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಪಠ್ಯದ ಮೇಲೆ ಬೀರಿದ್ದು, ನಿಗದಿತ ಸಮಯಕ್ಕೆ ಎಸ್ಎಸ್ಎಲ್ಸಿಯ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ದಾವಣಗೆರೆಯ ಶೇ. 60 ರಷ್ಟು ಸರ್ಕಾರಿ ಶಾಲೆಗಳಲ್ಲಿ ಕೇವಲ ಶೇ. 40 ರಿಂದ 45 ರಷ್ಟು ಪಠ್ಯಕ್ರಮ ಮುಕ್ತಾಯವಾಗಿದೆ.
ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿದೆ: