ಕರ್ನಾಟಕ

karnataka

ETV Bharat / state

ಎಸ್ಎಸ್ಎಲ್​ಸಿ ಪರೀಕ್ಷೆ : ದಾವಣಗೆರೆಯಲ್ಲಿ 1125 ವಿದ್ಯಾರ್ಥಿಗಳು ಗೈರು - SSLC Exam in Davanagere news

ಹರಿಹರದಲ್ಲಿ ವಿದ್ಯಾರ್ಥಿನಿಗೆ ಸೋಂಕು ಬಂದಿರುವ ಬಗ್ಗೆ ಖಚಿತಪಡಿಸಿರುವ ಡಿಸಿ ಮಹಾಂತೇಶ್ ಆರ್. ಬೀಳಗಿ, ವಿದ್ಯಾರ್ಥಿನಿ ಚೆನ್ನಾಗಿದ್ದಾರೆ. ಕಂಟೈನ್ಮೆಂಟ್ ಝೋನ್ ಆದ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ನಡೆಸಲಾಗಿದೆ. ಡೆಸ್ಕ್​ಗೆ ಒಬ್ಬರಂತೆ ಕೂರಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ 1125 ವಿದ್ಯಾರ್ಥಿಗಳು ಗೈರು
ದಾವಣಗೆರೆಯಲ್ಲಿ 1125 ವಿದ್ಯಾರ್ಥಿಗಳು ಗೈರು

By

Published : Jul 1, 2020, 10:34 PM IST

ದಾವಣಗೆರೆ: ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ಒಟ್ಟು 21,693 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, ಈ ಪೈಕಿ 20,568 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 1,125 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಸಿ ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.

ದಾವಣಗೆರೆಯಲ್ಲಿ 1125 ವಿದ್ಯಾರ್ಥಿಗಳು ಗೈರು

ಕಂಟೈನ್ಮೆಂಟ್ ಝೋನ್‍ನಿಂದ 80 ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದಿದ್ದು, ಖಾಸಗಿ ಶಾಲೆಯ ಒಟ್ಟು 418 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಇದರಲ್ಲಿ 331 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 87 ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿಲ್ಲ. 392 ವಲಸೆ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು ಈ ಪೈಕಿ 387 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5 ವಿದ್ಯಾರ್ಥಿಗಳು ಬಂದಿಲ್ಲ. 183 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಹರಿಹರದಲ್ಲಿ ವಿದ್ಯಾರ್ಥಿನಿಗೆ ಸೋಂಕು ಬಂದಿರುವ ಬಗ್ಗೆ ಖಚಿತಪಡಿಸಿರುವ ಡಿಸಿ ಮಹಾಂತೇಶ್ ಆರ್. ಬೀಳಗಿ, ವಿದ್ಯಾರ್ಥಿನಿ ಚೆನ್ನಾಗಿದ್ದಾರೆ. ಕಂಟೈನ್ಮೆಂಟ್ ಝೋನ್ ಆದ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ನಡೆಸಲಾಗಿದೆ. ಡೆಸ್ಕ್​ಗೆ ಒಬ್ಬರಂತೆ ಕೂರಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details