ಕರ್ನಾಟಕ

karnataka

ETV Bharat / state

16 ಕೆಜಿ ಚಿನ್ನ, ₹152 ಕೋಟಿ ಆಸ್ತಿಯ ಎಸ್.ಎಸ್.ಮಲ್ಲಿಕಾರ್ಜುನ್ - ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್

ಎಸ್.ಎಸ್.ಮಲ್ಲಿಕಾರ್ಜುನ್​ ಅವರು ನಿನ್ನೆ(ಗುರುವಾರ) ನಾಮಪತ್ರ ಸಲ್ಲಿಸಿದ್ದು, ಅಫಿಡವಿಟ್​ನಲ್ಲಿ ಆಸ್ತಿ ವಿವರ ತಿಳಿಸಿದ್ದಾರೆ.

cng
ಎಸ್ ಎಸ್ ಮಲ್ಲಿಕಾರ್ಜುನ್

By

Published : Apr 14, 2023, 3:36 PM IST

Updated : Apr 14, 2023, 4:22 PM IST

ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್​ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ಧಾರೆ. ಇವರು ತಮ್ಮ ಅಫಿಡವಿಟ್‌ನಲ್ಲಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಒಟ್ಟು 152 ಕೋಟಿ ರೂ ಆಸ್ತಿಯನ್ನು ಇವರು ಹೊಂದಿದ್ದಾರೆ.

ಅಫಿಡವಿಟ್ ಪ್ರಕಾರ, ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಾರ್ಷಿಕ ಆದಾಯದಲ್ಲಿ ಕುಸಿತವಾಗಿದೆ. 2017-18 ರಲ್ಲಿ ಇವರಿಗೆ 20.34 ಕೋಟಿ ರೂ ವಾರ್ಷಿಕ ಆದಾಯವಿತ್ತು. 2021-22ರಲ್ಲಿ 2.07 ಕೋಟಿ ಆದಾಯವಿತ್ತು ಎಂದು ತೋರಿಸಿದ್ದಾರೆ.

ಪತ್ನಿ ಬಳಿ 3 ಕೆ.ಜಿ ಚಿನ್ನ: 81.93 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ 70.70 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇವರಿಗೆ 23.60 ಕೋಟಿ ರೂಪಾಯಿ ಸಾಲವಿದೆ. ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಹೆಸರಿನಲ್ಲಿ 5.88 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ 30.61 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ. ಇವರಿಗೆ 97.28 ಲಕ್ಷ ರೂಪಾಯಿ ಸಾಲವಿದೆ. ಮಲ್ಲಿಕಾರ್ಜುನ ಅವರ ಬಳಿ 15.35 ಕೋಟಿ ರೂ ಮೌಲ್ಯದ 16.545 ಕೆಜಿ ಚಿನ್ನ, 628.840 ಕೆಜಿ ಬೆಳ್ಳಿ ಇದೆ. ಪತ್ನಿಯ ಬಳಿ ಒಂದು ಕೋಟಿ ಮೌಲ್ಯದ 3.195 ಕೆಜಿ ಚಿನ್ನವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:₹ 27 ಕೋಟಿ ಮೊತ್ತದ ಆಸ್ತಿ ಹೊಂದಿದ್ದಾರೆ ಸಚಿವ ಎಸ್.ಟಿ.ಸೋಮಶೇಖರ್

ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

Last Updated : Apr 14, 2023, 4:22 PM IST

ABOUT THE AUTHOR

...view details