ಕರ್ನಾಟಕ

karnataka

ETV Bharat / state

ವೀಕೆಂಡ್ ಕರ್ಫ್ಯೂ ಹಿನ್ನೆಲೆ ಆಹಾರಕ್ಕಾಗಿ ತೊಂದರೆ: ಸ್ಫೂರ್ತಿ ಸೇವಾ ಟ್ರಸ್ಟ್​​ನಿಂದ ಅನ್ನದಾನ

ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಊಟಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಮನಗಂಡ ದಾವಣಗೆರೆಯ ಸ್ಫೂರ್ತಿ ಸೇವಾ ಟ್ರಸ್ಟ್ ಹಸಿದವರ ಹೊಟ್ಟೆ ತುಂಬಿಸಲು ಮುಂದಾಗಿದೆ.

 spoorthy seva trust donate food to people
spoorthy seva trust donate food to people

By

Published : Apr 25, 2021, 4:28 PM IST

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕೊರೊನಾಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದೆ. ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಊಟಕ್ಕೆ ತೊಂದರೆಯಾಗುತ್ತಿದ್ದು, ಇದನ್ನು ಮನಗಂಡ ದಾವಣಗೆರೆಯ ಸ್ಫೂರ್ತಿ ಸೇವಾ ಟ್ರಸ್ಟ್​ನಿಂದ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರಿಗೆ ಉಚಿತವಾಗಿ ಊಟದ ಪ್ಯಾಕೇಟ್​ಗಳನ್ನು ವಿತರಣೆ ಮಾಡಲಾಗುತ್ತಿದೆ.

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ವೀರೇಶ್ ಸಮ್ಮುಖದಲ್ಲಿ ನೂರಾರು ಜನರಿಗೆ ಫುಡ್ ಪ್ಯಾಕೇಟ್​​ಗಳನ್ನು ವಿತರಣೆ ಮಾಡಲಾಯಿತು. ಕಳೆದ ಲಾಕ್​​ಡೌನ್ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಫುಡ್ ಪ್ಯಾಕೇಟ್​​​ಗಳನ್ನು ಬಡ ಹಾಗೂ ನಿರ್ಗತಿಕ ಜನರು ಸೇರಿದಂತೆ ಆಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಕರಿಗೆ ಉಚಿತವಾಗಿ ವಿತರಣೆ ಮಾಡಿದ್ದರು.

ಇದೇ ರೀತಿ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಜನರಿಗೆ ಊಟದ ಸಮಸ್ಯೆಯಾಗಬಾರದು ಎಂದು ಸ್ಫೂರ್ತಿ ಸೇವಾ ಟ್ರಸ್ಟ್ ವತಿಯಿಂದ ಗಾಡಿಯಲ್ಲಿ ಉಚಿತವಾಗಿ ಊಟ ವಿತರಣೆ ಮಾಡಿದ್ದಾರೆ.

ABOUT THE AUTHOR

...view details