ದಾವಣಗೆರೆ:ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ರಂಭಾಪುರಿ ಜಗದ್ಗುರುಗಳು ಆದಷ್ಟು ಬೇಗ ಗುಣಮುಖರಾಗಲೆಂದು, ಪ್ರಾರ್ಥಿಸಿ ಆವರಗೊಳ್ಳ ಗ್ರಾಮದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ರಂಭಾಪುರಿ ಶ್ರೀಗಳ ಚೇತರಿಕೆಗೆ ಪ್ರಾರ್ಥಿಸಿ ವಿಶೇಷ ಪೂಜೆ - Rambhapuri Sri had corona
ಕೊರೊನಾ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಭಾಪುರಿ ಜಗದ್ಗುರುಗಳು, ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಮಾಡಲಾಯಿತು.
![ರಂಭಾಪುರಿ ಶ್ರೀಗಳ ಚೇತರಿಕೆಗೆ ಪ್ರಾರ್ಥಿಸಿ ವಿಶೇಷ ಪೂಜೆ ಕೋವಿಡ್‌ನಿಂದ ರಂಭಾಪುರಿ ಶ್ರೀಗಳು ಗುಣಮುಖರಾಗಲೆಂದು ಪೂಜೆ](https://etvbharatimages.akamaized.net/etvbharat/prod-images/768-512-8725173-917-8725173-1599561906579.jpg)
ಕೋವಿಡ್‌ನಿಂದ ರಂಭಾಪುರಿ ಶ್ರೀಗಳು ಗುಣಮುಖರಾಗಲೆಂದು ಪೂಜೆ
ರಂಭಾಪುರಿ ಶ್ರೀಗಳ ಚೇತರಿಕೆಗೆ ಪ್ರಾರ್ಥಿಸಿ ವಿಶೇಷ ಪೂಜೆ
ಆವರಗೊಳ್ಳದ ಆದಿ ದೈವ ಕನ್ನೇಶ್ವರಸ್ವಾಮಿ, ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಕೋವಿಡ್‌ನಿಂದ ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ಜೇನು ತುಪ್ಪ, ಕ್ಷೀರ ಸಹಿತ ವಿಶೇಷ ರುದ್ರಾಭಿಷೇಕ ನೆರವೇರಿಸಿ, ಗ್ರಾಮದ ಹಿರಿಯರಿಂದ ಅಭಿಷೇಕ, ಅರ್ಚನೆ, ಪೂಜೆ ಸಲ್ಲಿಕೆ ಮಾಡಲಾಯಿತು.
Last Updated : Sep 8, 2020, 5:29 PM IST