ದಾವಣಗೆರೆ:ಕೊರೊನಾ ಸೋಂಕಿಗೆ ತುತ್ತಾಗಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ದುರ್ಗಾಂಬಿಕೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊರೊನಾಗೆ ತುತ್ತಾಗಿರುವ ಕಾಂಗ್ರೆಸ್ ನಾಯಕರು ಗುಣಮುಖರಾಗುವಂತೆ ವಿಶೇಷ ಪೂಜೆ - Former Minister S .Mallikarjun
ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜನಪರ ಕೆಲಸ ಮಾಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ದಾವಣಗೆರೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಶೀಘ್ರ ಗುಣಮುಖರಾಗಲಿ ಎಂದು ವಿಶೇಷ ಪೂಜೆ ನೆರವೇರಿಸಲಾಗಿದೆ.
ಕೊರೊನಾಗೆ ತುತ್ತಾಗಿರುವ ಕಾಂಗ್ರೆಸ್ ನಾಯಕರು ಗುಣಮುಖರಾಗುವಂತೆ ವಿಶೇಷ ಪೂಜೆ
ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜನಪರ ಕೆಲಸ ಮಾಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ದಾವಣಗೆರೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ಜನಪರ ಕಾರ್ಯ ಮುಂದುವರಿಯಬೇಕು. ಹಾಗಾಗಿ ಆದಷ್ಟು ಬೇಗ ಇಬ್ಬರು ನಾಯಕರು ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ದೇಶದಾದ್ಯಂತ ಕೊರೊನಾ ಎಂಬ ಹೆಮ್ಮಾರಿ ಬೇಗ ತೊಲಗಲಿ. ದುರ್ಗಾಂಬಿಕಾ ದೇವಿಯು ರೋಗ ನಿರ್ಮೂಲನೆ ಮಾಡಲಿ ಎಂದು ಕಾಂಗ್ರೆಸ್ ಮುಖಂಡರು ವಿಶೇಷ ಪೂಜೆ ನೆರವೇರಿಸಿದರು.