ಕರ್ನಾಟಕ

karnataka

ETV Bharat / state

ಮುರುಘಾ ಶರಣರು ಆರೋಪಮುಕ್ತರಾಗಿ ಬರಲು ದಾವಣಗೆರೆಯಲ್ಲಿ ವಿಶೇಷ ಪೂಜೆ

ಶರಣ ಸಂಸ್ಕೃತಿಯನ್ನು ಜನಮಾನಸದಲ್ಲಿ ಇರುವಂತೆ ಮಾಡಿದ್ದು ಮುರುಘಾ ಶರಣರು, ಅವರ ಮೇಲೆ ಬಂದಿರುವ ಆರೋಪಗಳಿಂದ ಮುಕ್ತರಾಗಲಿ, ಮತ್ತೆ ಪೀಠ ಅಲಂಕರಿಸಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ.

special-puja-in-davangere-for-muruga-sharan
ಮುರುಘಾ ಶರಣರು ಆರೋಪಮುಕ್ತರಾಗಿ ಬರಲು ದಾವಣಗೆರೆಯಲ್ಲಿ ವಿಶೇಷ ಪೂಜೆ

By

Published : Sep 9, 2022, 8:15 PM IST

ದಾವಣಗೆರೆ: ಚಿತ್ರದುರ್ಗ ಮುರುಘಾ ಶರಣರ ಬಂಧನದ ಹಿನ್ನೆಲೆಯಲ್ಲಿ ಅವರು ಆರೋಪಗಳಿಂದ ಮುಕ್ತರಾಗಿ ಬರಲಿ ಎಂದು ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯ ಹನುಮಾನ್ ದ್ಯಾನ ಮಂದಿರದಲ್ಲಿ ಮುರುಘಾ ಶ್ರೀಗಳ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಹಾಗೂ ಮುರುಘಾ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಭಕ್ತರು, ಶ್ರೀಗಳು ದೋಷಮುಕ್ತರಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮುರುಘಾ ಶರಣರು ಆರೋಪಮುಕ್ತರಾಗಿ ಬರಲು ದಾವಣಗೆರೆಯಲ್ಲಿ ವಿಶೇಷ ಪೂಜೆ

ಬಸವರಾಜ್ ಗುರೂಜಿ ನೇತೃತ್ವದಲ್ಲಿ ಕ್ಷೀರಾಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿ, ಬಳಿಕ ಮಾತನಾಡಿದ ಅವರು ಶರಣ ಸಂಸ್ಕೃತಿಯನ್ನು ಜನಮಾನಸದಲ್ಲಿ ಇರುವಂತೆ ಮಾಡಿದ್ದು ಮುರುಘಾ ಶರಣರು, ಅವರ ಮೇಲೆ ಬಂದಿರುವ ಆರೋಪಗಳಿಂದ ದೋಷಮುಕ್ತರಾಗಲಿ ಮತ್ತು ಮತ್ತೆ ಪೀಠವನ್ನು ಅಲಂಕರಿಸಲಿ. ಸತ್ಯಕ್ಕೆ ಜಯ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ:ಮುರುಘಾ ಶ್ರೀ ಬಂಧನ: ಚಿತ್ರದುರ್ಗ ಮಠಕ್ಕೆ ಬಸವ ಶ್ರೀ ಪ್ರಶಸ್ತಿ ವಾಪಸ್​ಗೆ ಪಿ ಸಾಯಿನಾಥ್ ನಿರ್ಧಾರ

ABOUT THE AUTHOR

...view details