ದಾವಣಗೆರೆ:ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮಹಾತೇಂಶ್ ಬೀಳಗಿಯವರು, ಕನಸು ಬಿತ್ತುವ ಹಾಗೂ ರಾಷ್ಟ್ರಕಟ್ಟುವ ಕೆಲಸ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ವಿಶೇಷವಾಗಿ ಸರ್ಕಾರಿ ಬಸ್ನಲ್ಲಿ ಆಗಮಿಸಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳಲ್ಲಿ ಕನಸನ್ನು ಬಿತ್ತಿದರು.
ದಾವಣಗೆರೆ ಡಿಸಿ ವಿನೂತನ ಕಾರ್ಯಕ್ರಮ: ಕನಸು ಬಿತ್ತಿ ರಾಷ್ಟ್ರಕಟ್ಟುವ ಕೆಲಸ ಮಾಡಿದ ಬೀಳಗಿ - ಕನಸು ಬಿತ್ತಿ ರಾಷ್ಟ್ರಕಟ್ಟುವ ಕೆಲಸ ಮಾಡಿದ ಮಹಾಂತೇಶ್ ಬೀಳಗಿ
ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮಹಾತೇಂಶ್ ಬೀಳಗಿಯವರು, ಕನಸು ಬಿತ್ತುವ ಹಾಗೂ ರಾಷ್ಟ್ರಕಟ್ಟುವ ಕೆಲಸ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ತಾವು ತಮ್ಮ ಕನಸುಗಳನ್ನು ಹೇಗೆ ಸಾಕಾರಗೊಳಿಸಲು, ಪಟ್ಟ ಕಷ್ಟಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಭಾವುಕರಾದರು. ವಿದ್ಯಾರ್ಥಿಗಳು ಕೂಡ ಕನಸು ಕಂಡು, ಅವುಗಳನ್ನು ಕಟ್ಟುವ ಕೆಲಸ ಮಾಡುವಂತೆ ಕರೆ ನೀಡಿದರು. ಗ್ರಾಮಕ್ಕೆ ಬಂದಂತಹ ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಂಡು, ಮಕ್ಕಳಲ್ಲಿ ಓದಿನ ಉತ್ಸಾಹ ತುಂಬಿದ್ರು.
ಇನ್ನು ಜಿಲ್ಲಾಧಿಕಾರಿ ಬೀಳಗಿಯವರೇ ಮಕ್ಕಳಿಗೆ ಊಟ ಬಡಿಸಿ, ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳು ನೀಡಿದ ಕೈ ತುತ್ತು ಸವಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳು ಬರೀ ಕನಸು ಕಂಡರೆ ಸಾಲದು, ಅದನ್ನು ಸಾಧಿಸುವ ಛಲವನ್ನು ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು. ಜಿಲ್ಲಾಡಳಿತದ ಕನಸು ಬಿತ್ತುವ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದ, ಮಕ್ಕಳು ತುಂಬಾ ಖುಷಿ ಪಟ್ರು.