ಕರ್ನಾಟಕ

karnataka

ETV Bharat / state

ಮಾನವ ಕುಲಕ್ಕೆ ಮಾರಕವಾಗಿರುವ ಕೊರೊನಾದಿಂದ ಮುಕ್ತಿ ದೊರೆಯಲಿ : ಬಿಷಪ್ ಫ್ರಾನ್ಸಿಸ್ ಸೆರಾವೊ

ಹರಿಹರದಲ್ಲಿ ಮಾತೆಯ ಸಾಂಪ್ರದಾಯಿಕ ತೇರಿನ ಮೆರವಣಿಗೆಯನ್ನು ಈ ಬಾರಿ ರದ್ದು ಮಾಡಲಾಗಿದ್ದು, ದೇವಾಲಯದಲ್ಲಿ ತಂಗಲು ಅವಕಾಶವಿರುವುದಿಲ್ಲ ಎಂದು ಮುಖ್ಯ ಗುರುಗಳಾದ ಫಾದರ್ ಡಾ. ಅಂತೋಣಿ ಪೀಟರ್ ಮಾಹಿತಿ ನೀಡಿದರು.

Harihar
ಬಿಷಪ್ ಫ್ರಾನ್ಸಿಸ್ ಸೆರಾವೊ

By

Published : Sep 12, 2020, 5:17 PM IST

ಹರಿಹರ(ದಾವಣಗೆರೆ):ಇಡೀ ವಿಶ್ವಕ್ಕೆ ಮಾರಕ ರೋಗವಾದ ಕೊರೊನಾದಿಂದ ನಮ್ಮೆಲ್ಲರ ಜೀವನ ಕಂಗೆಟ್ಟಿದೆ ಇದರಿಂದ ಮುಕ್ತಿ ದೊರೆಯಲಿ ಎಂದು ಹರಿಹರ ಆರೋಗ್ಯ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೊ ಆಶಿಸಿದರು.

ಹರಿಹರದ ಆರೋಗ್ಯ ಮಾತೆ ಬಸಿಲಿಕಾದ ಮಹೋತ್ಸವ ನಿಮ್ಮಿತ್ತ ಹಮ್ಮಿಕೊಂಡಿದ್ದ ಪೂಜಾವಿಧಿಯನ್ನು ಅರ್ಪಿಸಿ ಭಕ್ತ ಜನರಿಗೆ ಆಶೀರ್ವಾದ ನೀಡುತ್ತಾ ಮಾತನಾಡಿದರು. ಪ್ರತಿ ವರ್ಷ ಹರಿಹರ ಮಾತೆಯ ವಾರ್ಷಿಕ ಮಹೋತ್ಸವನ್ನು ಅದ್ದೂರಿಯಿಂದ ಸಾವಿರಾರು ಭಕ್ತಾಧಿಗಳ ಸಮೂಹದೊಂದಿಗೆ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಕೊರೊನಾ ಮಾರಕ ಕಾಯಿಲೆಯ ಕಾರಣಕ್ಕಾಗಿ ಅತ್ಯಂತ ಸರಳವಾಗಿ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಕೇವಲ ಪೂಜಾ ವಿಧಿಗಳಿಗೆ ಸೀಮಿತವಾದ ಭಕ್ತಿ ಕಾರ್ಯಗಳನ್ನು ಮಾತ್ರ ಹಮ್ಮಿಕೊಂಡಿದ್ದೇವೆ. ಈ ಸಂದರ್ಭದಲ್ಲಿ ಮಾತೆಯಲ್ಲಿ ಭಕ್ತಿಯಿಂದ ಸಲ್ಲಿಸುವ ಏಕೈಕ ಪ್ರಾರ್ಥನೆಯೆಂದರೆ ಇಡೀ ವಿಶ್ವಕ್ಕೆ ಮಾರಕವಾಗಿರುವ ಈ ಕೊರೊನಾ ಕಾಯಿಲೆ ನಿರ್ಮೂಲನೆಯಾಗಲಿ. ವಿಶ್ವದ ಎಲ್ಲಾ ಜನರ ಜೀವನ ಹಸನಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನುಡಿದರು.

ಹರಿಹರ ಮಾತೆ ಬಸಿಲಿಕದ ಮುಖ್ಯ ಗುರುಗಳಾದ ಫಾದರ್ ಡಾ. ಅಂತೋಣಿ ಪೀಟರ್ ಮಾತನಾಡಿ, ಕೊರೊನಾ ಕಾಯಿಲೆ ಅನೇಕ ಜನರ ಜೀವ, ಜೀವನವನ್ನು ಕಿತ್ತುಕೊಂಡಿದೆ. ಇದರಿಂದ ಮುಕ್ತಿ ಪಡೆಯಲು ನಾವು ಸನ್ನದ್ದರಾಗೋಣ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಮಾತೆಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ನುಡಿದರು.

ಪ್ರತಿ ವರ್ಷ ಮಾತೆಯ ಸಾಂಪ್ರದಾಯಿಕ ತೇರಿನ ಮೆರವಣಿಗೆಯನ್ನು ಈ ಬಾರಿ ರದ್ದು ಮಾಡಲಾಗಿದೆ ಹಾಗೂ ದೇವಾಲಯದಲ್ಲಿ ತಂಗಲು ಅವಕಾಶವಿರುವುದಿಲ್ಲ ಎಂದು ಮಾಹಿತಿಯನ್ನು ನೀಡಿದರು. ಜೊತೆಗೆ ಮುಂಜಾಗೃತ ಕ್ರಮವಾಗಿ ಇಡಿ ದೇವಾಲಯದ ಆವರಣಕ್ಕೆ ಸ್ಯಾನಿಟೈಸರ್ ಮಾಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಡಿಮೆ ಪ್ರಮಾಣದ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದು ಎದ್ದು ಕಾಣುತ್ತಿತ್ತು.

ವಿಶೇಷ ಮಾತೆಯ ಪ್ರತಿಷ್ಟಾಪನೆ :

ಹರಿಹರ ಮಾತೆಯ ವಿಶೇಷ ಹೂವಿನ ಅಲಂಕಾರವನ್ನು ಮಾಡಿ ದೇವಾಲಯದಲ್ಲಿ ಪ್ರತಿಷ್ಟಾಪನೆ ಮಾಡಿದ್ದು ಆಕರ್ಷಣೆಯಾಗಿತ್ತು.

ABOUT THE AUTHOR

...view details