ದಾವಣಗೆರೆ:ನ್ಯಾಮತಿ ತಾಲೂಕಿನ ಮಾದನಬಾವಿಯ ಮೊರಾರ್ಜಿ ವಸತಿ ನಿಲಯದ ಕೋವಿಡ್ ಸೆಂಟರ್ನ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಸ್ವತಃ ರೋಗಿಗಳಿಗೆ ಊಟ ಬಡಿಸಿ ಧೈರ್ಯ ತುಂಬಿದ್ದಾರೆ.
ಕೋವಿಡ್ ಸೆಂಟರ್ನ ಕೊರೊನಾ ಸೋಂಕಿತರಿಗೆ ಹೋಳಿಗೆ ಊಟ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 150 ಕೊರೊನಾ ಸೋಂಕಿತರಿಗೆ ಹೋಳಿಗೆ, ಪಲ್ಯ ಸೇರಿದಂತೆ ಹಬ್ಬದೂಟ ಉಣಬಡಿಸಿದರು. ಕ್ವಾರಂಟೈನ್ ನಲ್ಲಿದ್ದ ಕಾರಣ ಗೌರಿಗಣೇಶ ಹಬ್ಬ ಆಚರಿಸಲಿಲ್ಲ ಎಂಬ ಕೊರಗು ನೀಗಿಸುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು.
ಸ್ವತಃ ಹೊಳಿಗೆ ಸಿದ್ಧಪಡಿಸಿದ ರೇಣುಕಾಚಾರ್ಯ ಸ್ವತಃ ರೇಣುಕಾಚಾರ್ಯ ಅವರೇ ಹೊಳಿಗೆ ಸಿದ್ಧಪಡಿಸಿ ಗಮನ ಸೆಳೆದರು. ಕೊರೊನಾ ಬಂದಾಕ್ಷಣ ಯಾರೂ ಸಾಯುವುದಿಲ್ಲ. ಆತ್ಮಸ್ಥೈರ್ಯ ಮುಖ್ಯ. ಎಲ್ಲರೂ ಆದಷ್ಟು ಬೇಗ ಗುಣಮುಖರಾಗಿ. ಏನೇ ಸಮಸ್ಯೆಯಿದ್ದರೂ ತಿಳಿಸಿ ಎಂದು ಹೇಳಿದರು.
ಇನ್ನು ಹೋಳಿಗೆ ಊಟದ ವ್ಯವಸ್ಥೆ ಮಾಡಿದ ರೇಣುಕಾಚಾರ್ಯ ಅವರಿಗೆ ಧನ್ಯವಾದ ಅರ್ಪಿಸಿದ ಸೋಂಕಿತರು, ಹಬ್ಬ ಆಚರಿಸಲಿಲ್ಲ ಎಂಬ ಕೊರಗು ನೀಗಿಸಿದರು. ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದು ಖುಷಿ ತಂದಿದೆ ಎಂದು ಹೇಳಿದರು.