ಕರ್ನಾಟಕ

karnataka

ETV Bharat / state

ಚಿಂವ್ ಚಿಂವ್ ಗುಬ್ಬಚ್ಚಿ ಪ್ರಂಪಂಚ...ಇಲ್ಲಿ ವಾಸವಾಗಿವೆ ಸುಮಾರು 5 ಸಾವಿರ ಗುಬ್ಬಚ್ಚಿಗಳು ! - ಹಂಚಿನ‌ಮನೆಗಳ

ಗುಬ್ಬಚ್ಚಿ ಉಳಿಸಿ ಎಂದು ಎಲ್ಲರೂ ಸಮಾಜಿಕ ಜಾಲತಾಣಗಳಲ್ಲಿ ಕಮೆಂಟ್, ಸ್ಟೇಟಸ್ ನ್ನು ಹಾಕಿಕೊಳ್ಳುತ್ತಾರೆ ಆದರೆ ಅವುಗಳ ಸಂರಕ್ಷಣೆಗೆ ಯಾರು ಮುಂದಾಗಲ್ಲ. ಆದರೆ ದಾವಣಗೆರೆಯಲ್ಲೊಬ್ಬರ ಮನೆ ಗುಬ್ಬಚ್ಚಿಗಳ ಪ್ರಂಪಚವಾಗಿದೆ.

ಗುಬ್ಬಚ್ಚಿ ಪ್ರಂಪಂಚ

By

Published : Mar 30, 2019, 1:50 AM IST

ದಾವಣಗೆರೆ : ಎಲ್ಲರೂ ಗುಬ್ಬಚ್ಚಿ ಉಳಿಸಿ ಎಂದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಸುಮ್ಮನಾಗುತ್ತಾರೆ. ಆದರೆ ಇಂತಹ ಪಕ್ಷಿಗಳಿಗೆ ನಗರದ ಎಸ್ ಓಜಿ ಕಾಲೋನಿಯಲ್ಲಿ ವಾಸವಾಗಿರುವ ಪಕ್ಷಿ ಪ್ರೇಮಿ ದಿನನಿತ್ಯ ಆಹಾರ, ನೀರು ನೀಡುವ ಮೂಲಕ ಮಕ್ಕಳಂತೆ ಸಾಕುತ್ತಿದ್ದಾರೆ.

ಬಿಸಿಲಿನ ತಾಪಕ್ಕೆ ಕುಡಿಯುವ ನೀರು ಹಾಗೂ ಆಹಾರ ಸಿಗದೆ ಹೈರಾಣಾಗಿರುವ ಪುಟ್ಟ ಪಕ್ಷಿಗಳುಇ ನಿತ್ರಾಣಗೊಳ್ಳುವುದರ ಜೊತೆಗೆ ಸಾವನ್ನಪ್ಪುತ್ತಿವೆ. ಗುಬ್ಬಚ್ಚಿಗಳಿಗೆ ಮನೆ ಇಲ್ಲ ಎಂಬ ಮಾತಿದೆ.‌ ಪ್ರತಿ ಮನೆಯಂಗಳದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಸದ್ದು ಪ್ರತಿನಿತ್ಯ ಇರುತ್ತಿತ್ತು. ಆದರೆ ಕಾಲ ಬದಲಾದಂತೆ ಗುಬ್ಬಿಗಳ ಸಂತತಿ ನಶಿಸುತ್ತಾ ಹೋಗುತ್ತಿದೆ. ಆದರೆ ದಾವಣಗೆರೆ ಎಸ್​ಒಜಿ ಕಾಲೋನಿಯಲ್ಲಿ ವಾಸವಾಗಿರುವ ಲಕ್ಷ್ಮಣ್ ಎಂಬುವವರ ಮನೆ ಮಾತ್ರ ಗುಬ್ಬಚ್ಚಿಗಳಿಗೆ ವಾಸಸ್ಥಾನವಾಗಿದೆ.

ಗುಬ್ಬಚ್ಚಿ ಪ್ರಂಪಂಚ

ಸುಮಾರು 13 ವರ್ಷಗಳಿಂದ ಗುಬ್ಬಚ್ಚಿ ಎಂದರೆ ಇವರಿಗೆ ಪಂಚ ಪ್ರಾಣವಂತೆ.ಇವರ ಮನೆಯ ಸುತ್ತಲು ನಿರ್ಮಾಣವಾಗಿದೆ ಗುಬ್ಬಚ್ಚಿ ಪ್ರಪಂಚ, ಲಕ್ಷ್ಮಣ್ ಅವರ ಮನೆ ಗುಬ್ಬಚ್ಚಿಗಳ ಮನೆಯಾಗಿ ಭಾಸವಾಗುತ್ತದೆ. ಎಲ್ಲಿ ನೋಡಿದ್ರೂ ಗುಬ್ಬಚ್ಚಿಗಳು ಕಾಣ ಸಿಗುತ್ತವೆ. ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ಗೂಡಗಳನ್ನು ಮಾಡಲಾಗಿದ್ದು, ಪ್ರತಿನಿತ್ಯ ಅವುಗಳಿಗೆ ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ಅಹಾರ ನೀರು ಸೇರಿದಂತೆ ಅವುಗಳಿಗೆ ಅವಶ್ಯವಿರುವ ಎಲ್ಲವನ್ನು‌ ಲಕ್ಷ್ಮಣ್ ಒದಗಿಸುತ್ತಾರೆ.

ಈ ಏರಿಯಾದಲ್ಲಿ ಇವರ ಮನೆ ಗುಬ್ಬಚ್ಚಿ‌ ಮನೆ ಎಂತಲೇ ಪ್ರಸಿದ್ದಿ ಪಡೆದಿದೆ. ಬೆಳೆಗಳಿಗೆ ಮಾರಕ ಔಷಧಿ ಸಿಂಪಡನೆ ಹಾಗೂ ಆಹಾರದ ಕೊರತೆಯಿಂದ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹಂಚಿನ‌ ಮನೆಗಳ ಬದಲು ತರೇಹವಾರಿ ಬಿಲ್ಡಿಂಗ್​​ಗಳಲ್ಲಿ ವಾಸ ಮಾಡಲು ಗುಬ್ಬಚ್ಚಿಗಳಿಗೆ ಕಷ್ಟ, ಹೀಗಾಗಿ ಬಿಸಿಲು, ಮಳೆ, ಗಾಳಿಗೆ ತತ್ತರಿಸುತ್ತಿದ್ದು, ಅಳಿವಿನತ್ತ ಸಾಗುತ್ತಿವೆ.

ಪೇಂಟರ್ ಕೆಲಸ ಮಾಡುತ್ತಾ ಪಕ್ಷಿಗಳ ಸಾಕುತ್ತಿರುವ ಲಕ್ಷ್ಮಣ, ತಮ್ಮ ಬಿಡುವಿನ ವೇಳೆ ಪಕ್ಷಿಗಳ ಬಗ್ಗೆ ಕಾಳಜಿ ತೋರುತ್ತಾ ಬೆಳಗ್ಗೆ,ಸಂಜೆ ಹೊತ್ತಲ್ಲಿ ಪಕ್ಷಿಗಳಿಗೆ ಆಹಾರ ಒದಗಿಸುತ್ತಾರೆ. ಇವರಿಗೆ ಪತ್ನಿ, ಮಕ್ಕಳು ಕೂಡ ಕೈ ಜೋಡಿಸಿ ಪಕ್ಷಿಗಳ ಉಳಿಸುವ ಕಾಯಕ ಮಾಡುತ್ತಿದ್ದಾರೆ. ಈ ಏರಿಯಾದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಗುಬ್ಬಚ್ಚಿಗಳು ವಾಸ ಮಾಡುತ್ತವೆ. ಅವುಗಳಲ್ಲಿ ಮುಕ್ಕಾಲು ಭಾಗ ಲಕ್ಷ್ಮಣ್ ಅವರ ಮನೆಯಿಂದಲೇ ಬೆಳೆದು ಹೋಗಿರುವವು.

ಇಲ್ಲಿ ವರ್ಷಕ್ಕೆ ಸುಮಾರು ನೂರಕ್ಕೂ ಹೆಚ್ಚು ಮರಿಗಳು ಹುಟ್ಟುತ್ತವೆ. ಇನ್ನೂ ಈ ಗುಬ್ಬಚ್ಚಿಗಳ ಜೊತೆಗೆ ಬುಲ್ ಬುಲ್, ರಾಬಿನ್ ಜೊತೆಯಾಗಿವೆ. ಹದ್ದುಗಳು ಬೇಟೆಯಾಡಲು ಬಂದಾಗ ಬುಲ್ ಬುಲ್ ಪಕ್ಷಿ ಎಲ್ಲಾ ಗುಬ್ಬಿಗಳಿಗೂ ಸಿಗ್ನಲ್ ಕೊಟ್ಟು ಎಚ್ಚರ ಮಾಡುತ್ತದೆ. ಆಗ ಎಲ್ಲಾ ಗುಬ್ಬಿಗಳು ಗೂಡಗಳಲ್ಲಿ ಸೇರಿ ತಮ್ಮ ಪ್ರಾಣ ಉಳಿಸಿಕೊಳ್ಳುತ್ತವಂತೆ.ಒಟ್ಟಾರೆ ಆಧುನಿಕ ಜಗತ್ತಿಗೆ ಸಿಲುಕಿ ನಶಿಸುವ ಹಂತಕ್ಕೆ ತಲುಪಿರುವ ಗುಬ್ಬಿಗಳ ಉಳಿವಿಗೆ ಇಡೀ ಕುಟುಂಬ ಟೊಂಕ ಕಟ್ಟಿ ನಿಂತಿರುವುದು ನಿಜಕ್ಕೂ ಒಳ್ಳೆಯ ಕೆಲಸ.

ABOUT THE AUTHOR

...view details