ಕರ್ನಾಟಕ

karnataka

ETV Bharat / state

ವ್ಯಾಪಾರಸ್ಥರಿಗೆ ಬಿಸಿ‌ ಮುಟ್ಟಿಸಲು ಫೀಲ್ಡಿಗಿಳಿದ ಎಸ್​ಪಿ ಹನುಮಂತರಾಯ..

ಈ ವೇಳೆ ಸಿಟಿ ರೌಂಡ್ಸ್ ಮಾಡಿದ ಎಸ್ಪಿ ಹನುಮಂತರಾಯ ಅವರು, ಮೊದಲಿಗೆ ಕಾರಿನಲ್ಲೇ ಕುಳಿತು ಸಮಾಧಾನದಿಂದ ನಿಯಮ ಪಾಲಿಸುವಂತೆ ತಿಳಿಸಿದರು. ಆದರೆ, ತಮ್ಮ ಮನವಿ ಕೂಡ ಧಿಕ್ಕರಿಸಿ ವ್ಯಾಪಾರ ಮಾಡುತ್ತಿದ್ದನ್ನು ಕಂಡು ಕೆಂಡಾಮಂಡಲರಾದರು. ಕಾರಿನಿಂದಿಳಿದು ತರಕಾರಿ ‌ಮಾರಾಟ ಮಾಡುವವರನ್ನು ಖುದ್ದು ತಾವೇ ಚದುರಿಸಿದರು.

SP Hanumantharayaya stepped in to field to control people in mass
ವ್ಯಾಪಾರಸ್ಥರಿಗೆ ಬಿಸಿ‌ ಮುಟ್ಟಿಸಲು ಫೀಲ್ಡಿಗಿಳಿದ ಎಸ್​ಪಿ ಹನುಮಂತರಾಯ...!

By

Published : Apr 1, 2020, 11:20 AM IST

ದಾವಣಗೆರೆ :ಕೊರೊನಾ ಭೀತಿ ನಡುವೆಯೂ ತರಕಾರಿ ‌ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಎಸ್​ಪಿ ಹನುಂತರಾಯ ಅವರೇ ಫೀಲ್ಡಿಗಿಳಿದು ತರಕಾರಿ ಕೊಳ್ಳಲು ಬಂದ ಜನರನ್ನು ಅವರು ಚದುರಿಸಿದ್ದಾರೆ.

ತರಕಾರಿಗಳನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು ಮನೆ ಬೀದಿಗಳಿಗೆ ಹೋಗಿ ವ್ಯಾಪಾರ ಮಾಡಬೇಕು ಎಂಬ ಅದೇಶ ನೀಡಲಾಗಿತ್ತು. ಆದರೆ, ಆ ಅದೇಶ ಉಲ್ಲಂಘನೆ ಮಾಡಿ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಲಾಗುತ್ತಿತ್ತು. ಈ ವೇಳೆ ಸಿಟಿ ರೌಂಡ್ಸ್ ಮಾಡಿದ ಎಸ್ಪಿ ಹನುಮಂತರಾಯ ಅವರು, ಮೊದಲಿಗೆ ಕಾರಿನಲ್ಲೇ ಕುಳಿತು ಸಮಾಧಾನದಿಂದ ನಿಯಮ ಪಾಲಿಸುವಂತೆ ತಿಳಿಸಿದರು. ಆದರೆ, ತಮ್ಮ ಮನವಿ ಕೂಡ ಧಿಕ್ಕರಿಸಿ ವ್ಯಾಪಾರ ಮಾಡುತ್ತಿದ್ದನ್ನು ಕಂಡು ಕೆಂಡಾಮಂಡಲರಾದರು. ಕಾರಿನಿಂದಿಳಿದು ತರಕಾರಿ ‌ಮಾರಾಟ ಮಾಡುವವರನ್ನು ಖುದ್ದು ತಾವೇ ಚದುರಿಸಿದರು.

ಜೊತೆಗೆ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡುತ್ತಿದ್ದ ಜನರು ಹಾಗೂ ವ್ಯಾಪಾರಸ್ಥರಿಗೆ ಬುದ್ಧಿ ಕಲಿಸಿದ್ದಾರೆ.

ABOUT THE AUTHOR

...view details