ಕರ್ನಾಟಕ

karnataka

ETV Bharat / state

ಐಎಸ್ಐ ಮಾರ್ಕ್ ಹೆಲ್ಮೆಟ್ ಕಡ್ಡಾಯಗೊಳಿಸಿಲ್ಲ: ಎಸ್​ಪಿ ಸ್ಪಷ್ಟನೆ - helmet with isi mark

ಐಎಸ್ಐ ಮಾರ್ಕ್​ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ ಎಂಬ ವದಂತಿ ಹಬ್ಬಿಸಲಾಗಿದೆ. ತಲೆಗೆ ಹೆಲ್ಮೆಟ್ ಹಾಕುವ ಪದ್ಧತಿ ಸರಿಯಿರಬೇಕು. ವಾಹನ ಚಾಲನೆ ಮಾಡುವಾಗ ತಲೆ ಸುರಕ್ಷಿತ ಆಗಿರಬೇಕು ಎಂದು ಎಸ್​ಪಿ ಹನುಮಂತರಾಯ ಹೇಳಿದ್ದಾರೆ.

sp
sp

By

Published : Sep 14, 2020, 12:02 PM IST

Updated : Sep 14, 2020, 12:35 PM IST

ದಾವಣಗೆರೆ:ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಕಡ್ಡಾಯಗೊಳಿಸಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿಲ್ಲ. ಗುಣಮಟ್ಟ, ತಲೆಗೆ ಸುರಕ್ಷಿತವಾದ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಸ್​ಪಿ ಹನುಮಂತರಾಯ ಸ್ಪಷ್ಟನೆ ನೀಡಿದ್ದಾರೆ.

ಎಸ್​ಪಿ ಸ್ಪಷ್ಟನೆ

ಐಎಸ್ಐ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ ಎಂಬ ವದಂತಿ ಹಬ್ಬಿಸಲಾಗಿದೆ. ತಲೆಗೆ ಹೆಲ್ಮೆಟ್ ಹಾಕುವ ಪದ್ಧತಿ ಸರಿಯಿರಬೇಕು. ವಾಹನ ಚಾಲನೆ ಮಾಡುವಾಗ ತಲೆ ಸುರಕ್ಷಿತ ಆಗಿರಬೇಕು ಎಂಬುದೇ ನಮ್ಮ ಉದ್ದೇಶ ಎಂದು ಹೇಳಿದರು.

ಸುರಕ್ಷಿತವಾದ ಹೆಲ್ಮೆಟ್ ಧರಿಸುವಂತೆ ಸೂಚನೆ

ಸುಮಾರು ಮೂರು ತಿಂಗಳು ಲಾಕ್​ಡೌನ್ ಆಗಿದ್ದರೂ ಈ ವರ್ಷ ಜಿಲ್ಲೆಯಲ್ಲಿ ಸಂಭವಿಸಿರುವ 138 ಅಪಘಾತ ಪ್ರಕರಣಗಳಲ್ಲಿ 162 ಜನರು ಮೃತಪಟ್ಟಿದ್ದಾರೆ. ಕಳೆದ ವರ್ಷ 233 ಪ್ರಕರಣಗಳಲ್ಲಿ 270 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಕ್ಯಾಪ್ ಹೆಲ್ಮೆಟ್ ಧರಿಸಿದ ವಾಹನ ಸವಾರ

ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಗಾಳಿಗೆ ಹಾರಿ ಹೋಗುವಂತ ಕ್ಯಾಪ್ ಹೆಲ್ಮೆಟ್ ಧರಿಸುತ್ತಿದ್ದಾರೆ. ಕ್ರಮಬದ್ಧವಾಗಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಸವಾರರು ವಾಹನ ಚಾಲನೆ ಮಾಡಬೇಕು ಎಂದರು.

Last Updated : Sep 14, 2020, 12:35 PM IST

ABOUT THE AUTHOR

...view details