ದಾವಣಗೆರೆ: ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡದಂತೆ ಜಿಲ್ಲಾದ್ಯಂತ ನಿಷೇಧ ಹೇರಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ನೂತನ ವರ್ಷಾಚರಣೆ ನಿಷಿದ್ಧ: ಎಸ್ಪಿ ಹನುಮಂತರಾಯ - ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ
ಸಾರ್ವಜನಿಕ ಸ್ಥಳಗಳು, ಮುಖ್ಯರಸ್ತೆಗಳು ಹಾಗೂ ಹೆಚ್ಚು ಜನರಿರುವಂತಹ ಅಪಾರ್ಟ್ಮೆಂಟ್ಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಸೂಚಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನೂತನ ವರ್ಷಾಚರಣೆ ನಿಷಿದ್ಧ: ಎಸ್ಪಿ ಹನುಮಂತರಾಯ
ಸಾರ್ವಜನಿಕ ಸ್ಥಳಗಳಲ್ಲಿ ನೂತನ ವರ್ಷಾಚರಣೆ ನಿಷಿದ್ಧ: ಎಸ್ಪಿ ಹನುಮಂತರಾಯ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳು, ಮುಖ್ಯರಸ್ತೆಗಳು ಹಾಗೂ ಹೆಚ್ಚು ಜನರಿರುವಂತಹ ಅಪಾರ್ಟ್ಮೆಂಟ್ಗಳಲ್ಲಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಜೊತೆಗೆ ಪಬ್, ವಿಶೇಷ ಪಾರ್ಟಿ, ಡಿಜೆಗಳಿಗೆ ನಿಷೇಧ ಹೇರಲಾಗಿದೆ. ಆದರೆ, ರೆಸ್ಟೋರೆಂಟ್, ಹೋಟೆಲ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಹಾಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಸರ್ಕಾರ ಹೊಸ ವರ್ಷದಂದು 12 ಗಂಟೆಯೊಳಗೆ ಮನೆ ಸೇರಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದು, ದಾವಣಗೆರೆಯಲ್ಲಿ ಅರ್ಧ ಗಂಟೆ ಹೆಚ್ಚು ಕಾಲಾವಕಾಶ ನೀಡುತ್ತೇವೆ ಎಂದರು.