ETV Bharat Karnataka

ಕರ್ನಾಟಕ

karnataka

ETV Bharat / state

ಲಾರಿಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಅನ್ಲೋಡ್ ಮಾಡಿದರೆ ವಾಹನ ಸೀಜ್ : ಸಿಬಿ ರಿಷ್ಯಂತ್​ - ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಎಸ್ಪಿ ಪ್ರತಿಕ್ರಿಯೆ

ಹಳೇ ದಾವಣಗೆರೆಯಲ್ಲಿ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸರಕುಗಳನ್ನು ಅನ್​​ಲೋಡ್​ ಮಾಡುತ್ತಿರುವುದರಿಂದ ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಿದ್ದು, ಇನ್ಮುಂದೆ ರಸ್ತೆಯಲ್ಲಿ ವಾಹನಗಳ ನಿಲ್ಲಿಸಿ ಅನ್​ಲೋಡ್​ ಮಾಡಿದಲ್ಲಿ ಅಂತಹ ವಾಹನಗಳನ್ನು ಸೀಜ್​ ಮಾಡಲಾಗುವುದಾಗಿ ಎಸ್ಪಿ ತಿಳಿಸಿದ್ದಾರೆ.

kn_dvg_
ರಸ್ತೆಗೆ ಅಡ್ಡ ನಿಲ್ಲಿಸಿಕೊಂಡು ಅನ್ಲೋಡ್ ಮಾಡಿದರೇ ವಾಹನ ಸೀಜ್
author img

By

Published : Nov 24, 2022, 6:55 PM IST

ದಾವಣಗೆರೆ: ಇನ್ಮುಂದೆ ವಾಹನಗಳನ್ನು ರಸ್ತೆಯಲ್ಲಿ ಬೇಕಾಬಿಟ್ಟಿ ನಿಲ್ಲಿಸಿಕೊಂಡು ಸರಕು ಅನ್ಲೋಡ್ ಮಾಡಿದರೇ ಅಂತಹ ವಾಹನಗಳನ್ನು ಸೀಜ್ ಮಾಡಲಾಗುವುದು. ಅಲ್ಲದೇ ಹಳೇ ದಾವಣಗೆರೆ ಭಾಗದಲ್ಲಿ ಸಂಚಾರಿ ನಿಯಮಗಳು ಗಾಳಿಗೆ ತೂರಲಾಗುತ್ತಿದ್ದು, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಎಸ್ಪಿ ರಿಷ್ಯಂತ್ ಸಾರ್ವಜನಿಕರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಹಳೇ ದಾವಣಗೆರೆ ಭಾಗದಲ್ಲಿ ವಾಹನ ಸವಾರರು, ಲಾರಿ ಚಾಲಕರು ತಮ್ಮ ವಾಹನಗಳನ್ನು ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ನಿಲ್ಲಿಸಿಕೊಂಡರೆ ಸಂಚಾರಿ ಪೊಲೀಸರು ವಾಹನವನ್ನು ಸೀಜ್ ಮಾಡಲು ಸನ್ನದ್ಧರಾಗಿದ್ದಾರೆ. ಇತಂಹದೊಂದು ಡ್ರೈವ್ ಕೆಲವೇ ದಿನಗಳಲ್ಲಿ ಆರಂಭಿಸಲು ಸ್ವತಃ ಎಸ್ಪಿ ಸಿಬಿ ರಿಷ್ಯಂತ್ ಅವರು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ.

ರಸ್ತೆಗೆ ಅಡ್ಡ ನಿಲ್ಲಿಸಿಕೊಂಡು ಅನ್ಲೋಡ್ ಮಾಡಿದರೇ ವಾಹನ ಸೀಜ್

ಈ ವಿಶೇಷ ಡ್ರೈವ್ ಬಹುತೇಕ ಹಳೇ ದಾವಣಗೆರೆ ಭಾಗದವರಿಗೆ ಅನ್ವಯಿಸುತ್ತಿದ್ದು,‌ ಕೆಆರ್ ಮಾರುಕಟ್ಟೆಯಲ್ಲಿ ಅಕ್ಕಿ ವ್ಯಾಪಾರಿಗಳ ಅಂಗಡಿ ಮುಂದೇ ಲಾರಿ ಚಾಲಕರು, ಗೂಡ್ಸ್ ವಾಹನ ಸವಾರರು ಗೂಡ್ಸ್​ ಅ​ನ್ನು ಅನ್ಲೋಡ್ ಮಾಡಲು ಇಡೀ ರಸ್ತೆ ಆವರಿಸಿಕೊಂಡು ಅನ್ಲೋಡ್‌ ಮಾಡುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಇದರಿಂದ‌ ಶಾಲೆಗೆ ತೆರಳುವ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ, ಇನ್ನು ಹೀಗೆ ರಸ್ತೆಯಲ್ಲಿ ಲಾರಿಗಳನ್ನು ನಿಲ್ಲಿಸುವುದರಿಂದ ಗಂಟೆಗಟ್ಟಲೆ ಟ್ರಾಫಿಕ್​​ ಜಾಮ್ ಆಗುವುದು, ಅಲ್ಲದೇ ಇದರಿಂದ ಅಪಘಾತಗಳಾಗಿರುವ ಉದಾಹರಣೆಗಳು ಇವೆ. ಆದ್ದರಿಂದ ಇದನ್ನು ಕಡಿವಾಣ ಹಾಕುವಂತೆ ಕೋರಿ ಜಿತೇಂದ್ರ ಎಂಬುವರು ಪೊಲೀಸ್​​ ಇಲಾಖೆಗೆ ಮನವಿ ಮಾಡಿದ್ದರು.

ಇನ್ನು ರಸ್ತೆಗಳಲ್ಲಿ ನಿಲ್ಲಿಸಿರುವ ಲಾರಿಗಳಿಂದ ಅಪಘಾತಗಳು ಹೆಚ್ಚಾಗುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವ ಎಸ್ಪಿ ಸಿಬಿ ರಿಷ್ಯಂತ್ ಇದನ್ನು ಕಡಿವಾಣ ಹಾಕಲು ವಿಶೇಷ ಡ್ರೈವ್ ಆರಂಭಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರಸ್ತೆಯಲ್ಲಿ ವಾಹನ ನಿಲ್ಲಿಸಿ ಅನ್ಲೋಡ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತಿದ್ದು, ಈಗಾಗಲೇ ಅಂತಹ ಕೆಲ ವಾಹನಗಳನ್ನು ಸೀಜ್ ಮಾಡಲಾಗಿದೆ.

ಹಾಗಾಗಿ ಬೆಳಗ್ಗೆ ವೇಳೆ ಲಾರಿಗಳು ಅನ್ಲೋಡ್​ಗೆ ಅವಕಾಶ ಇರಲ್ಲ. ನಿಮ್ಮ ವಾಹನಗಳು ಸೀಜ್‌ ಆಗಾಬಾರದು ಎಂದಾದರೇ ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಸರಕುಗಳನ್ನು ಅನ್ಲೋಡ್ ಮಾಡಬೇಕು ಎಂದು ಲಾರಿ ಚಾಲಕರಿಗೆ ಹಾಗು ಮಾಲೀಕರಿಗೆ ಎಸ್ಪಿ ಮನವಿ ಮಾಡಿದರು.

ಇದನ್ನೂ ಓದಿ:ಮಾಜಿ ಶಾಸಕ ಬಿ ಎಂ ತಿಪ್ಪೇಸ್ವಾಮಿಯವರ ಸಮಾಧಿ ಹಾನಿ.. ದಾವಣಗೆರೆಯಲ್ಲಿ ತೀವ್ರಗೊಂಡ ಹೋರಾಟ

ABOUT THE AUTHOR

...view details