ಕರ್ನಾಟಕ

karnataka

ETV Bharat / state

ಹೆದ್ದಾರಿಯಲ್ಲಿ ಪಥ ಶಿಸ್ತು ಉಲ್ಲಂಘಿಸಿದರೆ ವಾಹನ ಸವಾರರಿಗೆ ದಂಡ - ಮಲ್ಟಿ ಪಂಕ್ಷನಲ್ ಡಿವೈಸರ್​

ಅಪಘಾತ ತಗ್ಗಿಸಲು ಪಥ ಶಿಸ್ತು ಕಾಪಾಡುವುದು ಅಗತ್ಯ ಎಂದು ದಾವಣಗೆರೆ ಎಸ್​​ಪಿ ಸಿ.ಬಿ.ರಿಷ್ಯಂತ್ ಹೇಳಿದ್ದಾರೆ.

ಎಸ್​ಪಿ ಸಿಬಿ ರಿಷ್ಯಂತ್
ಎಸ್​ಪಿ ಸಿಬಿ ರಿಷ್ಯಂತ್

By

Published : Feb 22, 2023, 9:50 PM IST

ದಾವಣಗೆರೆ :ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ಬೇಕಾಬಿಟ್ಟಿಯಾಗಿ ವಾಹನಗಳ ಚಲಾವಣೆ ಮಾಡುವುದಕ್ಕೆ ಕಡಿವಾಣ ಹಾಕಲು ದಾವಣಗೆರೆ ಜಿಲ್ಲಾ ಪೊಲೀಸ್​ ಸಿದ್ಧವಾಗಿದೆ. ಹೆದ್ದಾರಿಯಲ್ಲಿ ಪಥ ಶಿಸ್ತು (ಲೇನ್ ಡಿಸಿಪ್ಲಿನ್) ಉಲ್ಲಂಘಿಸಿದರೆ ವಾಹನ ಸವಾರರಿಗೆ ದಂಡ ವಿಧಿಸಲಾಗುವುದೆಂದು ಎಸ್​​ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಮೀಸಲಾದ ಪಥದಲ್ಲಿ ಭಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ಕಾರು ಮತ್ತಿತರ ವಾಹನಗಳ ಸವಾರರು ವೇಗದಲ್ಲಿ ಬೇರೆ ಬೇರೆ ಪಥಗಳಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ ಸಾವುನೋವು ಹೆಚ್ಚಾಗುತ್ತಿದ್ದವು. ಹೀಗಾಗಿ ಅಪಘಾತ ತಗ್ಗಿಸಲು ಪಥ ಶಿಸ್ತು ಕಾಪಾಡುವುದು ಅಗತ್ಯ ಎಂದು ಎಸ್​​ಪಿ ಹೇಳಿದರು.

ಇದನ್ನೂ ಓದಿ:ಬೇಲೂರು ಸಕಲೇಶಪುರ ರೈಲ್ವೆ ಮಾರ್ಗ ಕೈಬಿಟ್ಟಿರುವ ಕ್ರಮ ಪ್ರಶ್ನಿಸಿದ್ದ ಸಾರ್ವಜನಿಕ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಮೊದಲ ಲೇನ್, ಒಳಪಥ ಹಾಗೂ ಬೃಹತ್ ಮತ್ತು ಭಾರಿ ವಾಹನಗಳು ಎರಡನೇ ಲೇನ್‌ನಲ್ಲಿ ಸಂಚರಿಸಬೇಕು. ಈ ಪಥಗಳನ್ನು ಬಿಟ್ಟು ವಾಹನ ಸವಾರರು ಬೇರೆ ಪಥಗಳಲ್ಲಿ ಚಲಿಸಿ ಶಿಸ್ತು ಉಲ್ಲಂಘಿಸಿದರೆ 500 ದಂಡ ವಿಧಿಸಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಪೈಲೆಟ್ ಪ್ರಾಜೆಕ್ಟ್​ ಆಗಿ ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಈ ವಾರದಿಂದಲೇ ಶಿಸ್ತು ಉಲ್ಲಂಘನೆಗೆ ದಂಡ ವಿಧಿಸುವ ಕಾರ್ಯವನ್ನು ಪೊಲೀಸರು ಆರಂಭಿಸಲಿದ್ದಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ :ನಷ್ಟದಲ್ಲಿ ಸಾರಿಗೆ ನಿಗಮಗಳು, ಬಿಡಿಎಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟ: ಸಿಎಜಿ ವರದಿಯಲ್ಲಿ ಬಹಿರಂಗ

ಸ್ವಾಯಂ ಚಾಲಿತ ಕ್ಯಾಮರಾ ಅಳವಡಿಕೆ: ದಂಡ ವಿಧಿಸುವ ಸಲುವಾಗಿ ಈಗಾಗಲೇ ನಂಬರ್ ಪ್ಲೇಟ್ ಗುರುತಿಸುವ 9 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೇಷನ್​​​​​ ಸ್ವಯಂ ಚಾಲಿತ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಹನಗಳು ಪಥ ಶಿಸ್ತು ಉಲ್ಲಂಘಿಸಿದರೆ ಆ ವಾಹನಗಳ ನಂಬರ್, ಸ್ಥಳ, ಸಮಯ, ಜಿಪಿಎಸ್, ಲೊಕೇಷನ್​​​ ಸಮೇತ ಚಿತ್ರಗಳು ಟೋಲ್ ಗೇಟ್​ಗಳಲ್ಲಿ ಇರುವ ಮಲ್ಟಿ ಪಂಕ್ಷನಲ್ ಡಿವೈಸರ್​ಗೆ ರವಾನೆಯಾಗಲಿದೆ. ಟೋಲ್​​ಗೆ ಆ ವಾಹನಗಳು ಬಂದು ನಿಂತಾಗ ಅಲ್ಲಿ ದಂಡ ವಿಧಿಸಲಾಗುವುದೆಂದು ಎಸ್​​ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದರು.

ಇದನ್ನೂ ಓದಿ:ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ: 20ಕ್ಕೂ ಹೆಚ್ಚು ಟಿಪ್ಪರ್ ಮರಳು ವಶ

ABOUT THE AUTHOR

...view details