ದಾವಣಗೆರೆ : ಊಟ ಕೊಡದೆ ನಮ್ಮ ತಾಯಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಮೃತ ಸೋಂಕಿತೆಯ ಮಗನೋರ್ವ ಜಿಲ್ಲಾಸ್ಪತ್ರೆಯ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಊಟ ಕೊಡದೆ ನಮ್ಮ ತಾಯಿಯನ್ನ ಸಾಯಿಸಿದ್ದಾರೆ : ಮೃತ ಸೋಂಕಿತೆಯ ಮಗನ ಆಕ್ರಂದನ
ವೆಂಟಿಲೇಟರ್ ಇಲ್ಲದೆ ಮೃತಪಟ್ಟಿದ್ದ ಮಹಿಳೆ ಎರಡು ಆಸ್ಪತ್ರೆ ಸುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮೃತ ಸೋಂಕಿತೆ ಕೊನೆಗೆ ವೆಂಟಿಲೇಟರ್ ಇಲ್ಲದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ..
ಮೃತ ಸೋಂಕಿತೆಯ ಮಗನ ಆಕ್ರಂದನ
ಈ ಕುರಿತು ಮಾತನಾಡಿದ ಆತ, ಇಲ್ಲಿನ ಸಿಬ್ಬಂದಿ ಊಟ ಕೊಡುವುದಾಗಿ ಕೇಳಿದ್ರೂ ಡಾಕ್ಟರ್ ನಾವಾ, ನೀವಾ ಎಂದು ಗದರಿದ್ದಾರೆ. ನಮ್ಮ ತಾಯಿ ರಾತ್ರಿಯೆಲ್ಲಾ ಊಟ ಬೇಕು ಎಂದು ಸುಮಾರು 10 ಬಾರಿ ಕೇಳಿದ್ದಾರೆ. ಆದ್ರೂ ಆಸ್ಪತ್ರೆ ಸಿಬ್ಬಂದಿ ಕೊಟ್ಟಿಲ್ಲ ಎಂದು ಆರೋಪಿಸಿದರು.
ನಿನ್ನೆ ವೆಂಟಿಲೇಟರ್ ಇಲ್ಲದೆ ಮೃತಪಟ್ಟಿದ್ದ ಲೋಕಿಕೆರೆ ಮೂಲದ ಮಹಿಳೆ ಎರಡು ಆಸ್ಪತ್ರೆ ಸುತ್ತಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮೃತ ಸೋಂಕಿತೆ ಕೊನೆಗೆ ವೆಂಟಿಲೇಟರ್ ಇಲ್ಲದೆ ಸಾವನ್ನಪ್ಪಿದ್ದಾರೆ ಎಂದು ಮೃತಳ ಮಗ ಆರೋಪ ಮಾಡಿದ್ದಾರೆ.
Last Updated : Apr 27, 2021, 7:26 PM IST