ಕರ್ನಾಟಕ

karnataka

ETV Bharat / state

ಹೊನ್ನಾಳಿಯಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಂದೆಯನ್ನೇ ಕೊಂದ ಮಗ - ಹೊನ್ನಾಳಿ ತಂದೆ ಕೊಲೆ ಪ್ರಕರಣ

ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ನರಸಿಂಹಪ್ಪನ ವಿರುದ್ಧ ತಾಯಿ ದೂರು‌ ನೀಡಿದ್ದಾಳೆ. ಹೊನ್ನಾಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ..

son-murdered-his-father-in-honnali
ಹೊನ್ನಾಳಿಯಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಂದೆಯನ್ನೇ ಕೊಂದ ಮಗ

By

Published : Apr 9, 2022, 10:06 PM IST

ದಾವಣಗೆರೆ :ಮದ್ಯ ಸೇವನೆಗೆ ಹಣ ಕೊಡದಿದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ. ಮಂಜಪ್ಪ (65) ಎಂಬಾತನೆ ಮಗನಿಂದ ಕೊಲೆಯಾದ ವ್ಯಕ್ತಿಯಾಗಿದ್ದು, ನರಸಿಂಹಪ್ಪ ಎಂಬುವ ಆರೋಪಿಯಾಗಿದ್ದಾನೆ.

ನರಸಿಂಹಪ್ಪ ಶುಕ್ರವಾರ ರಾತ್ರಿ ಹಣ ನೀಡುವಂತೆ ತಂದೆಗೆ ಪೀಡಿಸಿದ್ದಾ‌ನೆ. ಹಣವಿಲ್ಲ, ಊಟ ಮಾಡಿ ಮಲಗು ಎಂದು ತಂದೆ ಮಂಜಪ್ಪ ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ನರಸಿಂಹಪ್ಪ, ತಂದೆಯನ್ನು ಎಳೆದಾಡಿ‌‌ ಕೆಳಗಿ ಬೀಳಿಸಿ ಎದೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ‌ಮಂಜಪ್ಪ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ನರಸಿಂಹಪ್ಪನ ವಿರುದ್ಧ ತಾಯಿ ದೂರು‌ ನೀಡಿದ್ದಾಳೆ. ಹೊನ್ನಾಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಶಿವ ದೇವಸ್ಥಾನದ ವಿಚಾರವಾಗಿ ನಡೀತು ಘರ್ಷಣೆ.. ಉತ್ಸವದ ವೇಳೆ ಯುವಕನ ಬರ್ಬರ ಹತ್ಯೆ

ABOUT THE AUTHOR

...view details