ಕರ್ನಾಟಕ

karnataka

ETV Bharat / state

ಮುಗಿದ ಮತದಾನ: ಕುಟುಂಬದ ಜೊತೆ ರಿಲ್ಯಾಕ್ಸ್ ಮೂಡ್‌ನಲ್ಲಿ ಸಿದ್ದೇಶ್ವರ್ - undefined

ಬೆಳಗ್ಗೆ ವಾಕಿಂಗ್ ಮುಗಿಸಿದ ಬಳಿಕ ದಿನಪತ್ರಿಕೆಗಳನ್ನು ಓದಿದ ಜಿ.ಎಂ ಸಿದ್ದೇಶ್ವರ, ಕುಟುಂಬದೊಂದಿಗೆ ಒಟ್ಟಿಗೆ ಕುಳಿತು ಉಪಹಾರ ಸೇವಿಸಿದರು. ನಂತರ ಕಾರ್ಯಕರ್ತರು ಬಂದು ಭೇಟಿಯಾದರು. ಅವರ ಜೊತೆ ಚುನಾವಣೆ ಫಲಿತಾಂಶದ ಲೆಕ್ಕಾಚಾರ ಹಾಗೂ ಮತದಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

ರಿಲ್ಯಾಕ್ಸ್ ಮೂಡ್ ನಲ್ಲಿ ಸಿದ್ದೇಶ್ವರ್

By

Published : Apr 24, 2019, 9:11 PM IST

ದಾವಣಗೆರೆ: ಕಳೆದ ಒಂದೂವರೆ ತಿಂಗಳಿನಿಂದಲೂ ಚುನಾವಣಾ ಪ್ರಚಾರ ಭರಾಟೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಮತದಾನದ ಬಳಿಕ ಅವರು ನಿರಾಳರಾಗಿರುವುದು ಕಂಡು ಬಂತು.

ರಿಲ್ಯಾಕ್ಸ್ ಮೂಡ್‌ನಲ್ಲಿ ಸಿದ್ದೇಶ್ವರ್

ಜಿ.ಎಂ ಸಿದ್ದೇಶ್ವರ್‌ ಅವರನ್ನು ವಿಶ್ರಾಂತಿಗಾಗಿ ಅವರು ಮಕ್ಕಳು ದಕ್ಷಿಣ ಆಫ್ರಿಕಾಗೆ ಕರೆಯುತ್ತಿದ್ದಾರಂತೆ. ಆದ್ರೆ, ಅಲ್ಲಿಗೆ ಹೋಗುವ ಮನಸ್ಸು ಮಾಡಿಲ್ಲ ಎಂದರು. ಆದರೆ, ಜಿಂದಾಲ್‌ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದು, ಈ ಬಗ್ಗೆ ಕುಟುಂಬದ ಸದಸ್ಯರ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು.

ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ತಾನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವುದಾಗಿಯೂ ವಿಶ್ವಾಸ ವ್ಯಕ್ತಪಡಿಸಿದರು.

ಪತ್ನಿ ಗಾಯತ್ರಿ ಸಿದ್ದೇಶ್ವರ್ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ಅವರು ತುಂಬಾ ಬ್ಯುಸಿ ಇದ್ದರು. ನಾವೂ ಸಹ ಪ್ರಚಾರಕ್ಕೆ ತೆರಳಿ ಮತಯಾಚಿಸಿದ್ದೇವೆ. ಈ ಬಾರಿಯೂ ತಮ್ಮ ಪತಿ ಗೆಲ್ಲುವುದಾಗಿ ಹೇಳಿಕೊಂಡರು.

For All Latest Updates

TAGGED:

ABOUT THE AUTHOR

...view details