ಕರ್ನಾಟಕ

karnataka

ETV Bharat / state

ಸರ್ಕಾರದ ಬಳಿ ಲಸಿಕೆನೇ ಇಲ್ಲ, ಸುಳ್ಳು ಹೇಳ್ತಿದ್ದಾರೆ: ಸಿದ್ದರಾಮಯ್ಯ - ಲಸಿಕೆ ಕೊರತೆ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

ಸರ್ಕಾರದ ಬಳಿ ವ್ಯಾಕ್ಸಿನ್ ಇಲ್ಲ. ನಮ್ಮ ಹತ್ರ ಅಷ್ಟಿದೆ, ಇಷ್ಟು ದಾಸ್ತಾನು ಇದೆ ಅಂತ ಸುಳ್ಳು ಹೇಳ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

siddaramaih
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

By

Published : Jul 2, 2021, 5:18 PM IST

ದಾವಣಗೆರೆ: ಸರ್ಕಾರದ ಬಳಿ ಲಸಿಕೆ ದಾಸ್ತಾನಿಲ್ಲ, ಹಾಗಾಗಿ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ನಗರದ ದುರ್ಗಾಂಬಿಕ ದೇವಸ್ಥಾನದ ಬಳಿ ಕಾಂಗ್ರೆಸ್ ಪಕ್ಷದಿಂದ ಆಯೋಜನೆ ಮಾಡಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವ ಕೆಲಸ ಸರ್ಕಾರದ್ದು. ಆದರೆ ಸರ್ಕಾರ ಅದನ್ನು ಸರಿಯಾಗಿ ನಿಭಾಯಿಸದ ಕಾರಣ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್.ಮಲ್ಲಿಕಾರ್ಜುನ ಅವರು ತಮ್ಮ ಸ್ವಂತ ಹಣದಲ್ಲಿ ಲಸಿಕೆ ಹಾಕಿಸಿದ್ದಾರೆ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಸರ್ಕಾರದ ಬಳಿ ವ್ಯಾಕ್ಸಿನ್ ಇಲ್ಲ. ನಮ್ಮ ಹತ್ರ ಅಷ್ಟು ಇದೆ, ಇಷ್ಟು ದಾಸ್ತಾನು ಇದೆ ಅಂತ ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು, ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿ, ನಮಗೂ ರಮೇಶ್ ಜಾರಕಿಹೊಳಿಗೂ ಸಂಬಂಧ ಇಲ್ಲ ಎಂದು ಹೇಳಿ ಹೊರಟು ಹೋದರು.

ಇದನ್ನೂ ಓದಿ:ಎಸ್​​ಸಿಎಸ್​​ಪಿ/ಟಿಎಸ್​​ಪಿ ಯೋಜನೆ ಅನುದಾನ ಎಲ್ಲೂ ಡೈವರ್ಟ್ ಮಾಡಿಲ್ಲ: ಸಿಎಂ ಸ್ಪಷ್ಟನೆ

ABOUT THE AUTHOR

...view details