ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಅರ್ಧಕ್ಕೆ ಅಂತ ಯಾರು ಹೇಳಿಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ. ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದ ಲ್ಲಿ ಮಾಧ್ಯಮಗಳೊಂದಿಗೆ ಕೇಂದ್ರ ಸರ್ಕಾರ ಅನ್ನಭಾಗ್ಯ ಅಕ್ಕಿ ಖರೀದಿಗೆ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ ಅಕ್ಕಿ ಖರೀದಿ ಬಗ್ಗೆ ಎಲ್ಲಾವನ್ನು ಸರಿಪಡಿಸುತ್ತೇವೆ. ಬಿಜೆಪಿಯವರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಬಿಜೆಪಿಯವರಿಗೆ ಸಂಬಂದಪಟ್ಟ ವಿಚಾರವಲ್ಲ. ಪ್ರಧಾನಮಂತ್ರಿ ಮೋದಿ ಅವರು 15 ಲಕ್ಷ ರೂ. ಕೊಡುತ್ತೀನಿ ಎಂದಿದ್ದರು ಕೊಟ್ಟಿದ್ದಾರಾ?. ಅವರ 10 ಭರವಸೆಗಳು ಹಾಗೇ ಇವೆ. ನಮ್ಮ ಸರ್ಕಾರ ರಚನೆಯಾಗಿ 15 ದಿನಗಳು ಕಳೆದಿದ್ದು, ಇನ್ನೂ ಕಾಲಾವಕಾಶ ಬೇಕು. ಎಲ್ಲವನ್ನು ಸರಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಪಠ್ಯ ಪುಸ್ತಕ ಶಿಕ್ಷಣ ವಿರುದ್ಧವಾಗಿದೆ. ಅದನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದೀವಿ. ಅದನ್ನು ನಾವು ಬದಲಾವಣೆ ಮಾಡುತ್ತೇವೆ. ಇದರಲ್ಲಿ ಗೊಂದಲ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ಕ್ರೀಡಾ ಸಚಿವ ಬಿ. ನಾಗೇಂದ್ರ ಅವರು ಮಾಮ, ಮಾಮ ಅಂದ್ಕೊಂಡೆ ಶ್ರೀರಾಮುಲು ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಪ್ರಬಲ ವ್ಯಕ್ತಿಯನ್ನು ಸೋಲಿಸಿ ನಾಗೇಂದ್ರ ಸಚಿವರಾಗಿದ್ದಾರೆ ಎಂದು ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಸತೀಶ್ ಜಾರಕಿಹೊಳಿ ಹೇಳಿದರು. ಬಿಜೆಪಿ ಎಸ್ಟಿ ಮೀಸಲಾತಿ ನೀಡಿದೆ ಅಂತ ನೀವು ಮರುಳಾಗಬೇಡಿ. ಎಸ್ಟಿ ಸಮುದಾಯಕ್ಕೆ ಬಿಜೆಪಿ ಪ್ರೀತಿಯಿಂದ ಮೀಸಲಾತಿ ಕೊಟ್ಟಿಲ್ಲ. ಚುನಾವಣೆಯಲ್ಲಿ ಸಮುದಾಯ ಕೈಕೊಡುತ್ತೆ ಅನ್ನೋ ಭಯದಲ್ಲಿ ಕೊಟ್ಟಿರೋದು. ಸ್ವಾಮೀಜಿಯ 274 ದಿನ ಧರಣಿಗೆ ಹೆದರಿ ಬಿಜೆಪಿ ಮೀಸಲಾತಿ ಕೊಟ್ಟಿರೋದು.