ದಾವಣಗೆರೆ: ಸದ್ಯದ ಬಿಎಸ್ವೈ ಸರ್ಕಾರ ಪಾಪದ ಕೂಸಿನ ಸರ್ಕಾರ, ನೈತಿಕತೆ ಇರದ ಸರ್ಕಾರ, ಅಕ್ರಮವಾಗಿ ಸರ್ಕಾರ ರಚನೆ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರೇ ಬ್ಲಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ ಟೀಕಾ ಪ್ರಹಾರ - ದಾವಣಗೆರೆ
ಸಿಎಂ ಸಿಡಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸಿಡಿ ಬಗ್ಗೆ ತನಿಖೆಯಾಗಿಲಿ ಅದರಲ್ಲಿ ಕೆಟ್ಟದಾಗಿ ಇದೆ ಎಂದು ಹೇಳುತ್ತಿದ್ದು, ಎಲ್ಲವೂ ತನಿಖೆಯಿಂದ ಹೊರಬರಲಿ ಎಂದು ಹೇಳಿದ್ದಾರೆ.
![ಬಿಜೆಪಿಯವರೇ ಬ್ಲಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ ಟೀಕಾ ಪ್ರಹಾರ Siddaramaiah](https://etvbharatimages.akamaized.net/etvbharat/prod-images/768-512-10249572-thumbnail-3x2-chaiii.jpg)
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಗ ಸರ್ಕಾರದ ಕೆಲ ಪ್ರಕರಣಗಳು ಒಂದೊಂದಾಗಿ ಹೊರ ಬರುತ್ತಿದ್ದು, ಬಿಜೆಪಿಯವರೇ ಬ್ಲಾಕ್ ಮೇಲ್ ಗಿರಾಕಿಗಳು. ಇನ್ನು ಸಿಎಂ ಅವರ ಸಿಡಿ ಬಗ್ಗೆ ತನಿಖೆಯಾಗಲಿ, ಅದರಲ್ಲಿ ಕೆಟ್ಟದಾಗಿ ಇದೆ ಎಂದು ಹೇಳುತ್ತಿದ್ದು, ತನಿಖೆಯಿಂದ ಹೊರಬರಲಿ. ಬಿಜೆಪಿಯಲ್ಲಿ ಈಗ ಕೆಲವರು ಆರೋಪ ಮಾಡುತ್ತಿದ್ದು, ಇವರು ಅಧಿಕಾರಕ್ಕೆ ಬಂದಿದ್ದು ಹೇಗೆ. ಶಾಸಕರನ್ನ ಖರೀದಿ ಮಾಡಿದ್ದರಿಂದ ಅಧಿಕಾರಕ್ಕೆ ಬಂದಿದ್ದು ಎಂದರು.
ಇನ್ನು ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಎಸ್ಟಿ ವಿರೋಧಿಯಲ್ಲ ಎಂದು ಸ್ಪಷ್ಟ ಪಡಿಸಿದರು. ಇನ್ನು ಇದೇ ವೇಳೆ, ಧಾರವಾಡ ಬಳಿ ಅಪಘಾತದಲ್ಲಿ ಸಾವನಪ್ಪಿದ್ದ ದಾವಣಗೆರೆ ಮೂಲದವರಿಗೆ ಸಂತಾಪ ಸೂಚಿಸಿದರು.