ದಾವಣಗೆರೆ: ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿ ಪಕ್ಷಗಳ ಟಾಂಗ್ ವಾರ್ ಜೋರಾಗಿಯೆ ನಡೆಯುತ್ತಿದೆ. ಇದೀಗ ಒಕ್ಕಲಿಗ, ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹೌದು ದಾವಣಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗ ನೀಡಿರುವ ಮೀಸಲಾತಿ ಯಾರಿಗೂ ಅರ್ಥ ಆಗಿಲಿಲ್ಲ. ಒಕ್ಕಲಿಗ, ಪಂಚಮಸಾಲಿ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಚುನಾವಣೆ ಗಿಮಿಕ್ ಎಂದು ಬಿಜೆಪಿ ನಾಯಕರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿಗೆ ಮೀಸಲಾತಿ ಪಾಠ ಮಾಡಿದ ಅವರು ಬಿಜೆಪಿ ಸರ್ಕಾರ ಮೀಸಲಾತಿ ಘೋಷಣೆ ಮಾಡಿದೆ. ಆದರೆ, ಎಲ್ಲಿಂದ ಮೀಸಲಾತಿ ಕೊಡುತ್ತಾರೆ ಎನ್ನವುದು ಗೊತ್ತಿಲ್ಲ. Ewc ಯಿಂದ ತೆಗೆದುಕೊಡುತ್ತಾರಾ ಎಂಬ ಬಗ್ಗೆಯೂ ಕೂಡ ತೀರ್ಮಾನ ಆಗಿಲ್ಲ. ಮೀಸಲಾತಿ ನೀಡಿವ ಬಗ್ಗೆ ಸಂವಿಧಾನ ಬದ್ಧವಾಗಿ ತೀರ್ಮಾನ ಆಗಬೇಕಿದೆ. ಯಾಕೆಂದರೆ 1994 ರಲ್ಲಿ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಮೀಸಲಾತಿ ಶೇ 50 ಕ್ಕಿಂತ ಮೀಸಲಾತಿ ಹೆಚ್ಚಾಗಬಾರದು ಎಂಬಾ ಆದೇಶ ಆಗಿದೆ. ಹಾಗೆಯೇ 1992 ರಲ್ಲಿ ಸುಪ್ರೀಂ ಕೋರ್ಟ್ ನ 09 ಜನ ನ್ಯಾಯಮೂರ್ತಿಗಳ ಪೀಠದಲ್ಲಿ ಶೇ 50 ಕ್ಕಿಂತ ಮೀಸಲಾತಿ ಹೆಚ್ಚಾಗಬಾರದು ಎಂದು ತೀರ್ಮಾನ ಆಗಿದೆ ಎಂಬುದನ್ನು ಸಿದ್ದರಾಮಯ್ಯ ನೆನಪಿಸಿದರು.
ಪ್ರಸ್ತುತವಾಗಿ ಕೇಂದ್ರದಲ್ಲಿ ಶೇ 49.5 % ಮೀಸಲಾತಿ ಇದೆ. ಈಗ Ewc ಗೆ ಶೇ 10ರಷ್ಟು ಕೊಟ್ಟಿದ್ದಾರೆ, ಒಟ್ಟು 59.5 ಮೀಸಲಾತಿ ಇದೆ. ಆದರೆ ಪಂಚಮಸಾಲಿಗಳಿಗೆ, ಒಕ್ಕಲಿಗರಿಗೆ ಎಷ್ಟು ಮೀಸಲಾತಿ ಕೊಡುತ್ತೇವೆ ಎನ್ನುವುದನ್ನ ಸರ್ಕಾರ ಹೇಳಿಲ್ಲ. ಸಂವಿಧಾನದ ತಿದ್ದುಪಡಿ ಆಗಿದೆ. ಆದರೆ ಸರ್ಕಾರವೇ ಇನ್ನೂ ಕನ್ಫೂಸ್ ನಲ್ಲಿ ಇದೆ, ಎಲೆಕ್ಷನ್ಗಾಗಿ ಈ ರೀತಿ ಮೀಸಲಾತಿ ಗಿಮಿಕ್ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದ್ದಾರೆ.
ಒಕ್ಕಲಿಗರ ಮೀಸಲಾತಿ ವಿಚಾರ: ಒಕ್ಕಲಿಗರಿಗೆ ಮೀಸಲಾತಿ ಕೊಡುವುದರಲ್ಲಿ ನಮ್ಮದೇನೂ ತಕರಾರಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ, ಸ್ಪಷ್ಟಪಡಿಸಿದರು. ಇನ್ನು 3ಎ ನಲ್ಲಿದ್ದ ಒಕ್ಕಲಿಗರನ್ನ 2c ಗೆ ಸೇರಿಸಿದ್ದಾರೆ, 3ಬಿಯಲ್ಲಿ ಇದ್ದ ಪಂಚಮಸಾಲಿಗಳನ್ನು 2D ಮಾಡಿದ್ದಾರೆ. ಇದೆಲ್ಲ ರಾಜಕೀಯ ಗಿಮಿಕ್ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಾಲ್ಮೀಕಿ ಶ್ರೀ 267 ದಿನ ಧರಣಿ ಕೂತಿದ್ದಾಗ ಈ ಬದಲಾವಣೆಯನ್ನು ಮಾಡಲಿಲ್ಲ. ಆದರೆ, ಚುನಾವಣೆಯ ಕಾರಣಕ್ಕಾಗಿ ಈಗ ಮೀಸಲಾತಿ ಕೊಟ್ಟಿದ್ದಾರೆ. ಕೇಂದ್ರ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಸುಗ್ರೀವಾಜ್ಞೆ ಮುಖಾಂತರ ಮಾಡಬೇಕಿತ್ತು, ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರದಿಂದ ಮಹಾದಾಯಿ ಯೋಜನೆ ಜಾರಿ: ಮಹದಾಯಿ ನೋಟಿಫಿಕೇಶನ್ 27-2-2020 ರಲ್ಲಿ ಆಗಿದ್ದು, ನೋಟಿಫಿಕೇಶನ್ ಆಗಿ 2 ವರ್ಷ 10 ತಿಂಗಳು ಕಳೆದರೂ DPR ಯಾಕೆ ಆಗಲಿಲ್ಲ. ಈಗ ನಾವು 2 ನೇ ತಾರೀಕಿನಂದು ಬೃಹತ್ ಸಮಾವೇಶ ಮಾಡುತ್ತೇವೆ ಎಂದ ಮೇಲೆ ಡಿಪಿಆರ್ ಮಾಡುತ್ತಿದ್ದಾರೆ. ಇದಕ್ಕಾಗಿ 2 ವರ್ಷ 10 ತಿಂಗಳು ಯಾಕೆ ತಡ ಮಾಡಿದ್ದಾರೆ. ಎಲೆಕ್ಷನ್ ಹತ್ತಿರ ಬಂದಿದೆ ಎಂದು ಈಗ ತರಾತುರಿಯಲ್ಲಿ ಡಿಪಿಆರ್ ಘೋಷಣೆ ಮಾಡುತ್ತಿದ್ದಾರೆ. ಈ ಗಿಮಿಕ್ ಎಲ್ಲ ಬಿಡಬೇಕು ಜನರ ಹಿತದೃಷ್ಟಿ ನೋಡಬೇಕು ಎಂದು ರಾಜ್ಯ ಬಿಜೆಪಿಗೆ ಖಡಕ್ ಆಗಿಯೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಅಮಿತ್ ಶಾ ರಾಜ್ಯಕ್ಕೆ ಭೇಟಿ ಸಿದ್ದರಾಮಯ್ಯ ವ್ಯಂಗ್ಯ:ಅಮಿತ್ ಶಾ ಬಂದು ಮಾಯ ಮಂತ್ರ ಮಾಡುತ್ತಾರಾ, ಅವರೇನು ಮಂತ್ರಗಾರರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಮಿತ್ ಶಾ, ವೆಸ್ಟ್ ಬಂಗಾಳ ಚುನಾವಣೆಯಲ್ಲಿ ಅಲ್ಲೇ ಉಳಿದಿದ್ದರು. ಹಿಮಾಚಲ ಪ್ರದೇಶದಲ್ಲಿ ಹೋಗಿ ಅಲ್ಲೇ ಉಳಿದಿದ್ದರು. ಆ ಮೇಲೆ ಏನಾಯ್ತು..? ಅಮಿತ್ ಶಾ ಏನು ಮಾಟ ಮಂತ್ರದ ದಂಡ ಇಟ್ಟುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಲಿಂಗಾಯತ, ಒಕ್ಕಲಿಗರಿಗೆ 2D - 2C ಪ್ರವರ್ಗ ಮೀಸಲಾತಿ: ಸರ್ಕಾರದ ರಿಸರ್ವೇಶನ್ ಮರು ಹಂಚಿಕೆ ಲೆಕ್ಕಾಚಾರವೇನು?