ಕರ್ನಾಟಕ

karnataka

ETV Bharat / state

ವೀರಶೈವ ಪಂಚಮಸಾಲಿ ಸಮಾಜವೇ ನನಗೆ ತಂದೆ-ತಾಯಿ: ವಚನಾನಂದ ಸ್ವಾಮೀಜಿ - Siddaganga Shivakumara Swamiji's First Commemoration

ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಆಯೋಜಿಸಿದ್ದ ಲಿಂ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಸ್ಮರಣೋತ್ಸವ ಹಾಗೂ ಹರ ಜಾತ್ರಾ ಮಹೋತ್ಸವಕ್ಕೆ ಸಹಕರಿಸಿದ ಭಕ್ತರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ

By

Published : Jan 22, 2020, 9:26 AM IST

ಹರಿಹರ: ತಾಲೂಕಿನ ಹನಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಲಿಂ. ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರ ಪ್ರಥಮ ಸ್ಮರಣೋತ್ಸವಕ್ಕೆ ಸಹಕರಿಸಿದ ಭಕ್ತರಿಗೆ ಏರ್ಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಭಕ್ತರ ಅಭಿನಂದನಾ ಸಮಾರಂಭದಲ್ಲಿ ಸ್ವಾಮೀಜಿ ಮಾತು

ಸಮಾರಂಭದಲ್ಲಿ ಮಾತನಾಡಿದ ಅವರು, ಯಾವ ಮರದಲ್ಲಿ ಹಣ್ಣುಗಳಿರುತ್ತವೆಯೋ ಆ ಮರ ಕಲ್ಲೇಟನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಂದು ಮಠ ಸಮಾಜವನ್ನು ಅಭಿವೃದ್ಧಿಯ ಪಥಕ್ಕೆ ಕೊಂಡಯ್ಯುವಾಗ ಸಾಕಷ್ಟು ಟೀಕೆ, ಟಿಪ್ಪಣಿಗಳು ಬರುವುದು ಸಹಜ. ಗುರುಗಳು ಕೋಪಗೊಂಡು ಮಾತನಾಡುತ್ತಿದ್ದಾರೆಂದರೆ ಸಮಾಜದ ಹಿತಾಸಕ್ತಿಗೆಂದು ಭಕ್ತರು ಅರ್ಥ ಮಾಡಿಕೊಳ್ಳಬೇಕೆಂದರು.

ವೀರಶೈವ ಪಂಚಮಸಾಲಿ ಸಮಾಜವೇ ನನಗೆ ತಂದೆ, ತಾಯಿ ಇದ್ದ ಹಾಗೆ. ಈ ಸಮುದಾಯದ ಅಭಿವೃದ್ಧಿ ಹಾಗೂ ಮಠವನ್ನು ರಾಷ್ಟ್ರಮಟ್ಟಕ್ಕೆ ಅಭಿವೃದ್ಧಿ ಪಡಿಸಬೇಕೆಂಬ ಗುರಿ ನಮ್ಮದಾಗಿದೆ. ಜೊತೆಗೆ ಹರಿಹರ ನಗರ ರಾಜ್ಯದ ಕೇಂದ್ರ ಬಿಂದು. ಮಠಗಳ ಬೀಡು ಹಾಗೂ ಐತಿಹಾಸಿಕ ದೇಗುಲಗಳನ್ನು ಹೊಂದಿರುವಂತಹ ಪುಣ್ಯಸ್ಥಳ. ಇದು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕಿದೆ ಎಂದರು.

ABOUT THE AUTHOR

...view details