ಕರ್ನಾಟಕ

karnataka

By

Published : May 18, 2021, 7:46 PM IST

ETV Bharat / state

ದಾವಣಗೆರೆಯಲ್ಲಿ ಆಕ್ಸಿಜನ್ ಖಾಲಿ : ಶಾಸಕರ ಸಮಯ ಪ್ರಜ್ಞೆಯಿಂದ ಉಳಿದ 50 ಜೀವ

ಆಕ್ಸಿಜನ್ ಖಾಲಿಯಾದ ವಿಚಾರ ತಿಳಿದ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು, ಸಿಎಂ ಬಿಎಸ್‌ವೈ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಶಿವಮೊಗ್ಗ ಡಿಸಿಗೆ ಜಂಬೋ‌ ಸಿಲಿಂಡರ್ ಕಳುಹಿಸಲು ಮನವಿ..

Davangere
Davangere

ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಆಕ್ಸಿಜನ್ ಖಾಲಿಯಾಗಿದೆ. 50 ಜನ ಕೊರೊನಾ ಸೋಂಕಿತರು ಪರದಾಡಿದ ಘಟನೆ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಹರಿಹರ ಪಟ್ಟಣದ ಸದರನ್ ಗ್ಯಾಸ್ ಏಜೆನ್ಸಿಯಿಂದ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್​ ಪೂರೈಕೆಯಾಗುತ್ತಿತ್ತು. ಆದರೆ, ಇಂದು ಮಾತ್ರ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ.

ಆಕ್ಸಿಜನ್ ಖಾಲಿಯಾದ ವಿಚಾರ ತಿಳಿದ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು, ಸಿಎಂ ಬಿಎಸ್‌ವೈ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಶಿವಮೊಗ್ಗ ಡಿಸಿಗೆ ಜಂಬೋ‌ ಸಿಲಿಂಡರ್ ಕಳುಹಿಸಲು ಮನವಿ ಮಾಡಿದರು.

ಈ ಬಳಿಕ ಶಿವಮೊಗ್ಗದಿಂದ 30, ದಾವಣಗೆರೆಯಿಂದ 10 ಸಿಲಿಂಡರ್​ಗಳು ಚನ್ನಗಿರಿ ಆಸ್ಪತ್ರೆಗೆ ಪೂರೈಕೆಯಾಗಿದ್ದು, ಶಾಸಕರ ಸಮಯ ಪ್ರಜ್ಞೆಯಿಂದ 50ಕ್ಕೂ ಹೆಚ್ಚು ಮಂದಿಯ ಜೀವ ಉಳಿದಿದೆ.

ABOUT THE AUTHOR

...view details