ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ದಸರಾ ಹಿನ್ನೆಲೆ ಶೋಭಾಯಾತ್ರೆ: ಭಾವೈಕ್ಯತೆ ಮೆರೆದ ಹಿಂದು-ಮುಸ್ಲಿಂ ಯುವಕರು!

ದಾವಣಗೆರೆ ನಗರದಲ್ಲಿ ದಸರಾ ಹಿನ್ನೆಲೆ ವಿಶ್ವ ಹಿಂದೂ ಪರಿಷತ್​ ಆಶ್ರಯದಲ್ಲಿ ಶೋಭಾಯಾತ್ರೆ ನಡೆಯಿತು. ನಗರದ ವೆಂಕಟೇಶ್ವರ ವೃತ್ತದಿಂದ ದುರ್ಗಾ ದೇವಿಗೆ ಪುಷ್ಪ ಅರ್ಪಿಸುವ ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ಮೆರವಣಿಗೆಗೆ ಚಾಲನೆ ನೀಡಿದರು.

By

Published : Oct 8, 2019, 4:36 PM IST

ದಸರಾ ಹಿನ್ನೆಲೆ ಶೋಭಾಯಾತ್ರೆ

ದಾವಣಗೆರೆ: ದಸರಾ ಹಬ್ಬ ಹಿನ್ನೆಲೆ ದಾವಣಗೆರೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.

ನಗರದ ವೆಂಕಟೇಶ್ವರ ವೃತ್ತದಿಂದ ದುರ್ಗಾ ದೇವಿಗೆ ಪುಷ್ಪ ಅರ್ಪಿಸುವ ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮುಸ್ಲಿಂ ಯುವ ಮುಖಂಡ ಅಮಾನುಲ್ಲಾ ಖಾನ್ ಹಿಂದು ಮುಖಂಡರಿಗೆ ಸಿಹಿ ತಿನ್ನಿಸುವ ಮೂಲಕ‌ ಭಾವೈಕ್ಯತೆ ಮೆರೆದರು.

ದಸರಾ ಹಿನ್ನೆಲೆ ಶೋಭಾಯಾತ್ರೆ

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ದಾವಣಗೆರೆಯಲ್ಲಿ ದಸರಾ ಹಿನ್ನೆಲೆ ಅದ್ಧೂರಿಯಾಗಿ ಶೋಭಾಯಾತ್ರೆ ನಡೆದಿದೆ. ಹಿಂದು-ಮುಸ್ಲಿಂರು ಭಾಯಿ ಭಾಯಿ ಎನ್ನುವುದು ಈ ಮೆರವಣಿಗೆ ಮೂಲಕ ಸಾಬೀತಾಗಿದೆ ಎಂದರು.

ಒಟ್ಟಾರೆ ಬೃಹತ್ ಶೋಭಾಯಾತ್ರೆ ಅದ್ಧೂರಿ ಮೆರವಣಿಗೆ ಮೂಲಕ ಬೀರಲಿಂಗೇಶ್ವರ ದೇವಾಲಯ ಆವರಣ ತಲುಪಿ ಅಲ್ಲಿ ಮಹಾಂತೇಶ್ ಎಸ್. ಬಿಳಗಿ ಅಂಬು ಛೇದನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.

ABOUT THE AUTHOR

...view details