ದಾವಣಗೆರೆ:ಸ್ಮಾರ್ಟ್ ಸಿಟಿ ದಾವಣಗೆರೆಯನ್ನು ಇನ್ನಷ್ಟು ಸ್ಮಾರ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ನಗರದ ಪಾರ್ಕ್ ಹಾಗೂ ವೃತ್ತಗಳನ್ನು ಅಭಿವೃದ್ದಿಪಡಿಸಲು ಉದ್ಯಮಿಗಳಿಗೆ ಜವಾಬ್ದಾರಿ ಕೊಡಲಾಗಿದೆ. ಈ ಹಿನ್ನೆಲೆ ಕೊಳಚೆಯಿಂದ ದುರ್ವಾಸನೆ ತುಂಬಿದ್ದ ಜಿಲ್ಲಾಸ್ಪತ್ರೆ ಮುಂಭಾಗದ ಪಾರ್ಕ್ ಅಭಿವೃದ್ದಿಗೆ ಶಶಿ ಸೋಪ್ ಇಂಡಸ್ಟ್ರಿ ಮುಂದಾಗಿದೆ.
ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರೂ ಸಹ ಉದ್ಯಾನವನಗಳು, ವೃತ್ತಗಳು ಸ್ವಚ್ಛತೆ ಹಾಗೂ ಅಭಿವೃದ್ದಿಯಿಲ್ಲದೆ ನಲುಗಿ ಹೋಗಿವೆ. ಈ ಹಿನ್ನೆಲೆ ಜಿಲ್ಲಾಡಳಿತ ಹೊಸ ಪ್ಲಾನ್ ಹಾಕಿದ್ದು, ಸಿಎಸ್ಆರ್ ನಿಯಮಾವಳಿ ಪ್ರಕಾರ ಕೈಗಾರಿಕೋದ್ಯಮಿಗಳು ಆದಾಯದ 2ರಷ್ಟು ಹಣವನ್ನು ಸಾಮಾಜಿಕ ಸೇವೆಗಳಿಗೆ ತೊಡಗಿಸಿಕೊಳ್ಳಬೇಕು. ದಾವಣಗೆರೆಯಲ್ಲಿರುವ ಎಲ್ಲಾ ಉದ್ಯಮಿಗಳಿಗೂ ವಿವಿಧ ಪಾರ್ಕ್ ಹಾಗೂ ವೃತ್ತಗಳ ಅಭಿವೃದ್ದಿಗೆ ಸಭೆ ನಡೆಸಲಾಗಿದ್ದು, ಮಾಲಿನ್ಯ ಕಡಿಮೆ ಮಾಡಲು ಕೈ ಜೋಡಿಸುವುದಾಗಿ ಉದ್ಯಮಿಗಳು ಒಪ್ಪಿಕೊಂಡಿದ್ದಾರೆ.