ಕರ್ನಾಟಕ

karnataka

ETV Bharat / state

ನಾನು ಕಾಂಗ್ರೆಸ್​ ಮ್ಯಾನ್​ ಆದ್ರೂ, ಬಿಎಸ್​ವೈ ನಮ್ಮ ಸಮಾಜದ ಆಶಾ ಕಿರಣ:  ಶಾಮನೂರು - kuruba Community

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಡಿಹೊಗಳಿದ್ದಾರೆ.

Shashanoor Sivasankarappa Praising  cm BSy
Shashanoor Sivasankarappa Praising cm BSy

By

Published : Jan 21, 2020, 7:13 PM IST

ದಾವಣಗೆರೆ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಡಿಹೊಗಳಿದ್ದಾರೆ.

ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ನಾಯಕ ಆಗಿರಬಹುದು, ಯಡಿಯೂರಪ್ಪ ಬಿಜೆಪಿಯಲ್ಲಿರಬಹುದು. ಆದ್ರೆ ಬಿಎಸ್​ವೈ ನಮ್ಮ ಸಮಾಜದ ಆಶಾಕಿರಣವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಎಸ್ ವೈ ಅವರನ್ನು ಹಾಡಿಹೊಗಳಿದ ಶಾಮನೂರು ಶಿವಶಂಕರಪ್ಪ

ಮಠಮಾನ್ಯಗಳಿಗೆ ಹೆಚ್ಚಿನ ಹಣವನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ. ಅವುಗಳು ಉದ್ಧಾರ ಆಗ್ತಾವೋ ಇಲ್ಲವೋ ಗೊತ್ತಿಲ್ಲ.‌ ಆದ್ರೆ ಯಡಿಯೂರಪ್ಪ ಅವರು ಮಾತ್ರ ಒಳ್ಳೆಯ ಹೆಸರು ಗಳಿಸಿದ್ದಾರೆ. ನಮ್ಮ ಸಮಾಜದ ಅಧಿಕಾರಿಗಳನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇವಲ ಕುರುಬ ಸಮುದಾಯದ ಅಧಿಕಾರಿಗಳೇ ಎಲ್ಲಾ ಕಡೆ ಕಾಣುತ್ತಿದ್ದರು ಎಂದು ಹೇಳಿದರು.

ವಚನಾನಂದ ಶ್ರೀಗಳು, ಹರಿಹರ ಪಂಚಮಸಾಲಿ ಪೀಠಾಧಿಪತಿಯಾದ ಬಳಿಕ ಅಭಿವೃದ್ಧಿ ಕೆಲಸಗಳನ್ನು ಜೋರಾಗಿ ಮಾಡುತ್ತಿದ್ದಾರೆ. ವಾಹನ ಬಹಳ ಸ್ಪೀಡ್ ಆಗಿ ಹೋದರೆ ಅಪಘಾತವಾಗುತ್ತೆ, ಸ್ವಲ್ಪ ಸ್ಲೋ ಆಗಿ ಹೋಗಿ ಎಂದು ಶ್ರೀಗಳಿಗೆ ಸಲಹೆ ನೀಡಿದರು.

ABOUT THE AUTHOR

...view details