ದಾವಣಗೆರೆ:ಹೊನ್ನಾಳಿ ತಾಲೂಕಿನ ಧಣಿಗಳ ರಾಜ್ಯಭಾರದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹಾಲಿ ಶಾಸಕ ಎಂ.ಪಿ.ರೇಣುಕಚಾರ್ಯ ವಿರುದ್ಧ ಮಾಜಿ ಶಾಸಕ ಶಾಂತನಗೌಡ ವಾಗ್ದಾಳಿ ನಡೆಸಿದ್ದಾರೆ.
ಹೊನ್ನಾಳಿಯಲ್ಲಿ ಅಧಿಕಾರಿಗಳು ರೇಣುಕಾಚಾರ್ಯಗೆ ಹೆದರಿ ಸಾಯುತ್ತಾರೆ: ಮಾಜಿ ಶಾಸಕ ಶಾಂತನಗೌಡ - MLA Renukacharya
ಹೊನ್ನಾಳಿ ತಾಲೂಕಿನ ಆಡಳಿತದಿಂದ ಹಿಡಿದು ಜಿಲ್ಲಾಡಳಿತದವರು ಶಾಮೀಲಾಗಿ ಒಂದು ಪರ್ಮಿಟ್ ಪಡೆದು ಹತ್ತು ಲಾರಿಗಳಲ್ಲಿ ಅಕ್ರಮವಾಗಿ ಮರಳು ಹೊಡೆಯುತ್ತಿದ್ದಾರೆ. ನಾನು ಕೂಡ ಎಸ್ಪಿ, ಡಿಸಿ, ಐಜಿಗೆ ಎಲ್ಲರಿಗೂ ಹೇಳಿದ್ರು ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಬದಲಾಗಿ ಅಧಿಕಾರಿಗಳು ಶಾಸಕ ಎಂ.ಪಿ.ರೇಣುಕಾಚಾರ್ಯ ವರ್ಗಾವಣೆ ಮಾಡಿಸುತ್ತಾರೆಂದು ಹೆದರಿ ಸಾಯುತ್ತಿದ್ದಾರೆ ಎಂದು ಮಾಜಿ ಶಾಸಕ ಶಾಂತನಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 2018ರಿಂದ 2020ರ ತನಕ ಯಾವ ಇಲಾಖೆಗಳಲ್ಲಿ ಏನೇನು ಆಗಿದೆ ಎಂದು ದಾಖಲೆ ಬಿಡುಗಡೆ ಮಡುತ್ತೇನೆ. ಇದು ನಮ್ಮ ತಾಲೂಕಿನ ಧಣಿಗಳ ಭ್ರಷ್ಟಾಚಾರ, ಅಣ್ಣ, ಅಕ್ಕ, ತಂಗಿ ಕುಟುಂಬದವರೆಲ್ಲಾ ಯಾವ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಾಡಿದ್ದಾರೆಂದು ಸವಿಸ್ತಾರವಾಗಿ ದಾಖಲೆಗಳನ್ನು ನೀಡುತ್ತೇನೆ.
ಜಿಲ್ಲಾಡಳಿತ ಹೊನ್ನಾಳಿಗೆ ಹೋಗಲಿ. ಅಕ್ರಮ ಮರಳು ಅಡ್ಡೆಗಳು, ಲಾರಿಗಳು ಅಲ್ಲಿ ಸಿಗದೆ ಹೋದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಟಿಪ್ಪರ್ಗಳ ಮೇಲೆ ಕ್ರಮ ಕೈಗೊಳ್ಳದೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಟ್ರ್ಯಾಕ್ಟರ್ ಹಾಗೂ ಎತ್ತಿನ ಗಾಡಿಗಳ ಮೇಲೆ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸ ಎಂದರು.