ದಾವಣಗೆರೆ: ಕಾಂಗ್ರೆಸ್ ಸೋತು ಸುಣ್ಣ ಆದ ಮೇಲೆ ಈಗ ಒಂದೇ ಎಂದು ಬರುತ್ತಿದ್ದಾರೆ. ಬೇರೆ ಬೇರೆ ಎಂದು ಎರಡು ಮಾಡಲು ಹೊರಟಿದ್ದರು. ಇವಾಗ ಒಂದೇ ಎಂದು ಬಂದಿದ್ದಾರೆ. ಬರಲಿ ಬಿಡಿ ಎಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸ್ವ- ಪಕ್ಷದವರ ವಿರುದ್ಧ ಗುಡುಗಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮೊದಲ ಬಾರಿ ಒಂದಾಗುವ ಹೇಳಿಕೆಯನ್ನು ಶಾಮನೂರು ನೀಡಿದರು. ಬಂದರೆ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ವೀರಶೈವ ಲಿಂಗಾಯಿತ ಎರಡು ಒಂದೇ. ಬೆಂಬಲ ಕೊಟ್ಟರೆ ಎಲ್ಲ ಬಡವರಿಗೆ ಸಹಾಯ ಆಗಲಿದೆ ಎಂದು ಹೇಳಿದರು.