ಕರ್ನಾಟಕ

karnataka

ETV Bharat / state

'ಒಂದು ಎತ್ತು ಸಾಕುವ ಅರ್ಹತೆ ಇಲ್ಲ, ನಮ್ಮ ವಿರುದ್ಧ ಮಾತಾಡ್ತಾರೆ': ಬಿಜೆಪಿ ನಾಯಕರ ವಿರುದ್ಧ ಶಾಮನೂರು ಗರಂ - ಪ್ರಜಾ ಧ್ವನಿ ಬಸ್ ಯಾತ್ರೆ

ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಒಡೆತನದ ರೈಸ್ ಮಿಲ್​ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ವಿರುದ್ಧ ಟೀಕಾಸಮರ ನಡೆಸಿದರು.

shamanur shivashankarappa
ಶಾಮನೂರು ಶಿವಶಂಕರಪ್ಪ

By

Published : Jan 18, 2023, 8:34 AM IST

ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪ

ದಾವಣಗೆರೆ: 'ಅವರಿಗೆ ಒಂದು ಎತ್ತು ಸಾಕಲು ಅರ್ಹತೆ ಇಲ್ಲ, ಅಂತವರು ನಮ್ಮ ವಿರುದ್ಧ ಮಾತನಾಡುತ್ತಾರೆ' ಎಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಒಡೆತನದ ರೈಸ್ ಮಿಲ್​ನಲ್ಲಿ ವನ್ಯಜೀವಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾವು ಎತ್ತು, ಆಕಳು, ಕುರಿ, ಕುದುರೆ ಎಲ್ಲಾ ಸಾಕುತ್ತಿದ್ದೇವೆ. ಅದ್ರೆ, ಈ ಬಿಜೆಪಿಯವರು ಏನು ಸಾಕಿದ್ದಾರೆ?. ಅವರು ಸಗಣಿ ತಿನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಸ್ಯಾಂಟ್ರೋ ರವಿ, 40 % ಕಮಿಷನ್​ ದಂಧೆ, ತಿಪ್ಪಾರೆಡ್ಡಿಯವರ ಕಮಿಷನ್ ಹಗರಣ ಸೇರಿದಂತೆ ಸಾಕಷ್ಟು ಕೇಸ್​ಗಳು ಹೊರಗಡೆ ಬರುತ್ತಿವೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರಲು ಪ್ರಜಾ ಧ್ವನಿ ಬಸ್ ಯಾತ್ರೆ ಮಾಡುತ್ತಿದ್ದೇವೆ. ನಮ್ಮ ಪರ ಸಾಕಷ್ಟು ಜನರ ಒಲವಿದೆ ಎಂದರು.

'ಪ್ರಕರಣ ಕೋರ್ಟ್​ನಲ್ಲಿದೆ':ಕಲ್ಲೇಶ್ವರ ಮಿಲ್​ನಲ್ಲಿ ಪತ್ತೆಯಾದ ವನ್ಯಜೀವಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಬಿಜೆಪಿಯವರಿಗೆ ತಲೆಯಲ್ಲಿ ಮೆದುಳಿಲ್ಲ. ಅದಕ್ಕೆ ಈ ಪ್ರಕರಣವನ್ನು ಕೆದಕಿದ್ದಾರೆ. ಪ್ರಕರಣ ಕೋರ್ಟ್​ನಲ್ಲಿರುವುದರಿಂದ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು. ಬಳಿಕ, ಬಿಜೆಪಿ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಹಗರಣಗಳು ಒಂದಲ್ಲ ಎರಡಲ್ಲ. ಸಾವಿರಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದಾವಣಗೆರೆಯಲ್ಲೂ ಕಮಿಷನ್ ದಂಧೆ ಹೆಚ್ಚಾಗಿದೆ. ಪ್ರಶ್ನೆ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯನವರನ್ನು ಜೈಲಿಗೆ ಹಾಕಿದ್ದು ಈ ಸರ್ಕಾರ. ಎಲ್ಲರನ್ನು ಜೈಲಿಗೆ ಹಾಕುವುದೇ ಬಿಜೆಪಿಯವರ ಕೆಲಸ ಎಂದು ಆಕ್ರೋಶಗೊಂಡರು.

ಇದನ್ನೂ ಓದಿ:ಮಾಜಿ‌ ಸಚಿವರ ರೈಸ್‌ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ ಕೇಸ್: ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಮುತ್ತಿಗೆ

ಫೆ.19 ಕ್ಕೆ ಪ್ರಜಾ ಧ್ವನಿ ಬಸ್ ಯಾತ್ರೆ: ಬೇರೆ ಜಿಲ್ಲೆಯಂತೆ ನಮ್ಮ ಜಿಲ್ಲೆಗೂ ಪ್ರಜಾ ಧ್ವನಿ ಬಸ್ ಯಾತ್ರೆ ಇದೇ ತಿಂಗಳ 19 ರಂದು ಸಂಜೆ 4ಕ್ಕೆ ಬರಲಿದ್ದು ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಸಾರಲಾಗುತ್ತದೆ. ಪ್ರಜಾ ಧ್ವನಿ ಬಸ್ ಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಸುರ್ಜೇವಾಲ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್ ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ವನ್ಯಜೀವಿಗಳ ಪತ್ತೆ ಪ್ರಕರಣವೇನು?:ಡಿಸೆಂಬರ್ 21 ರಂದು ಕಲ್ಲೇಶ್ವರ ಮಿಲ್‌ ಮೇಲೆ ಸಿಸಿಬಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ 11 ಕೃಷ್ಣಮೃಗ, 7 ಜಿಂಕೆಗಳು, 7 ಕಾಡು ಹಂದಿ, 3 ಮುಂಗುಸಿ ಹಾಗೂ 2 ನರಿಗಳು ಪತ್ತೆಯಾಗಿದ್ದವು. ಫಾರ್ಮ್ ಹೌಸ್‌ನಲ್ಲಿ ಪತ್ತೆಯಾದ ಒಟ್ಟು 30 ವನ್ಯಜೀವಿಗಳನ್ನು ಆನಗೋಡು ಕಿರು ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಗಿತ್ತು.

ಇದನ್ನೂ ಓದಿ:ವನ್ಯಜೀವಿಗಳು ಪತ್ತೆ ಪ್ರಕರಣ: ಆರೋಪಿಗಳಿಗೆ ನೋಟಿಸ್ ನೀಡುವಂತೆ ಕೋರ್ಟ್​ ಸೂಚನೆ

ABOUT THE AUTHOR

...view details