ಕರ್ನಾಟಕ

karnataka

ETV Bharat / state

ಪಾದಯಾತ್ರೆ ಮಾಡಿ ಪಾಪ ತೊಳೆದುಕೊಂಡು ಬನ್ನಿ: ಬಿಜೆಪಿ ನಿರ್ಧಾರಕ್ಕೆ ವ್ಯಂಗ್ಯವಾಡಿದ ಶಾಮನೂರು - Davanagere

ಜಿಂದಾಲ್​ಗೆ ಭೂಮಿ ನೀಡುವ ಕುರಿತು ರಾಜ್ಯದಲ್ಲಿ ಒಬ್ಬೊಬ್ಬ ನಾಯಕ ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಇನ್ನು ಇದೇ ವಿಷಯದ ಬಗ್ಗೆ ಮಾತನಾಡಿದ ಹಿರಿಯ ಕೈ ಮುಖಂಡ ಶಾಮನೂರು ಶಿವಶಂಕರಪ್ಪ ಅವರೂ ಸಹ ಒಂದು ಹೇಳಿಕೆ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ

By

Published : Jun 18, 2019, 1:57 PM IST

ದಾವಣಗೆರೆ:ಜಿಂದಾಲ್​ಗೆ ಭೂಮಿ ಕೊಡುವ ವಿಚಾರದ ಬಗ್ಗೆ ಕ್ಯಾಬಿನೆಟ್​ ಉಪಸಮಿತಿ ನಿರ್ಣಯ ಕೈಗೊಳ್ಳಲಿದೆ. ಬಿಜೆಪಿಯವರು ಈ ಬಗ್ಗೆ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಮಾಡುವುದಾದರೆ ಮಾಡಲಿ, ಯಾರು ಬೇಡ ಅಂತಾರೆ? ಇದರಿಂದ ರೋಗ-ರುಜಿನಿ ಎಲ್ಲಾ ಹೋಗುತ್ತವೆ ಎಂದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್​ಗೆ ಜಾಗ ನೀಡುವ ವಿಚಾರ ಈ ಹಿಂದೆ ಬಿಜೆಪಿಯವರೇ ಮಾಡಿದ್ದು, ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಬಿನೆಟ್​ ಉಪಸಮಿತಿ ಜಾಗ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ಬಿಜೆಪಿಯವರು ಬೇಕಿದ್ದರೆ ಪಾದಯಾತ್ರೆ ಮಾಡಿಕೊಳ್ಳಲಿ ಎಂದಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ

ಎಲ್ಲಿ ನ್ಯಾಯ ಸಿಗುತ್ತೋ ಅಲ್ಲಿ ಹೋಗಲಿ:

ಲಿಂಗಾಯಿತ ಪ್ರತ್ಯೇಕ ಧರ್ಮಕ್ಕಾಗಿ ಜಾಗತಿಕ ಲಿಂಗಾಯಿತ ಮಹಾಸಭಾ ಸುಪ್ರಿಂ ಕೋರ್ಟ್​ಗೆ ಹೋಗುವ ವಿಚಾರ ಹಿನ್ನೆಲೆ, ವೀರಶೈವ ಮತ್ತು ಲಿಂಗಾಯಿತ ಎರಡೂ ಒಂದೇ. ಈಗ ಮಾತನಾಡುವವರು ಆಮೇಲೆ ಮನೆಯಲ್ಲಿ ಕೂರುತ್ತಾರೆ, ಅವರಿಗೆ ಎಲ್ಲಿ ನ್ಯಾಯ ಸಿಗುತ್ತೋ ಅಲ್ಲಿಯೇ ಹೋಗಲಿ ಎಂದು ಶಾಮನೂರು ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details