ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮತ್ತೊಮ್ಮೆ ಧ್ವನಿ ಎತ್ತಿದ ಎಂ.ಬಿ ಪಾಟೀಲ್ಗೆ ಅಖಿಲ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಒಂದೇ ಅನ್ನೋದು ವೀರಶೈವ ಮಹಾಸಭಾದ ನಿಲುವು. ಲಿಂಗಾಯತರಲ್ಲಿ ಉಪಜಾತಿ ಯಾವುದು ಇಲ್ಲ. ಎಲ್ಲವು ಒಂದೇ. ಸಾಧರ ಲಿಂಗಾಯತ, ಬಣಜಿಗರು, ಪಂಚಾಚಾರ್ಯರು, ಎಲ್ಲರನ್ನ ವೀರಶೈವರು ಎಂದು ಪರಿಗಣನೆ ಮಾಡ್ತಿವಿ ಎಂದರು. ಹೋರಾಟ ಮಾಡುವವರು ಮಾಡಲಿ. ಅವರೇ ತಣ್ಣಗಾಗುತ್ತಾರೆಂದು ಎಂ.ಬಿ. ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದರು.
ಪಂಚಪೀಠದವರು ಎಲ್ಲರೂ ಸೇರಿ ಬಸವ ಧರ್ಮ ಆಗಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಆದ್ರೆ ನಮಗೆ ಸೌಲಭ್ಯ ಸಿಗುತ್ತದೆ. ಲಿಂಗಾಯತ ಪ್ರತ್ಯೇಕ ಧರ್ಮವಾದ್ರೆ ಎಲ್ಲರಿಗೂ ಮೀಸಲಾತಿ ಸಿಗುತ್ತದೆ. ಅದಕ್ಕಾಗಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋರಾಟ ಮಾಡುತ್ತೇನೆಂದು ಮಾಜಿ ಗೃಹ ಸಚಿವರಾದ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಗರಂ ಆದ ಶಾಮನೂರು ಶಿವಶಂಕರಪ್ಪ, ಅವನೇನು ಒಟ್ಟಿಗೆ ಕರೆದುಕೊಂಡು ಹೋಗ್ತಾನೆ? ಅವನ ಹಣೆ ಬರಹ. ಅವನು ಏನೇ ಹೇಳಿಕೆ ನೀಡಲಿ, ನಮ್ಮ ನಿಲುವು ಒಂದೇ ಎಂದರು.