ಕರ್ನಾಟಕ

karnataka

ETV Bharat / state

ನೆರೆ ಪರಿಹಾರ ಘೋಷಿಸುವಂತೆ ವೇದಿಕೆಯಲ್ಲಿ ರೇಣುಕಾಚಾರ್ಯಗೆ ಪಟ್ಟು ಹಿಡಿದ ಶಿವಶಂಕರಪ್ಪ - MLA Renukacharya

ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಿಸುವಂತೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯಗೆ ವೇದಿಕೆಯಲ್ಲೇ ಪಟ್ಟು ಹಿಡಿದ ಘಟನೆ ಶ್ರೀ ಶೈಲ ಮಠದಲ್ಲಿ ನಡೆದಿದೆ.

ರೇಣುಕಾಚಾರ್ಯಗೆ ಪಟ್ಟು ಹಿಡಿದ ಶಾಮನೂರು ಶಿವಶಂಕರಪ್ಪ

By

Published : Sep 11, 2019, 5:12 AM IST

Updated : Sep 11, 2019, 7:01 AM IST

ದಾವಣಗೆರೆ : "ನೆರೆ ಸಂತ್ರಸ್ಥರಿಗೆ ದೇಣಿಗೆ ಕೊಡು, ತಪ್ಪಿಸಿಕೊಳ್ಳಬೇಡ, ಇಲ್ಲೆ ಹೇಳಿ ಬಿಡು, ಮಾತು ಕೊಡು, ಸ್ವಾಮಿಜಿ‌ ಕಾಲು ಮುಟ್ಟಿ ಹೇಳು".. ಈ ದೃಶ್ಯಗಳು ಕಂಡು ಬಂದಿದ್ದು ನಗರದ ಶ್ರೀ ಶೈಲ ಮಠದಲ್ಲಿ. ಶಾಸಕ ಎಂಪಿ ರೇಣುಕಾಚಾರ್ಯಗೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದ ಪ್ರಸಂಗಗಳಿವು.

ಶ್ರೀ ಶೈಲ ಮಠದ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಪರಿಹಾರ ಕೊಡುವ ವಿಚಾರವಾಗಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ನೆರೆ ಸಂತ್ರಸ್ತರಿಗೆ 25 ಲಕ್ಷ ರೂ ಹಣವನ್ನು ಈಗಾಗಲೇ ಸಿಎಂ ಪರಿಹಾರ ನಿಧಿಗೆ ಕೊಟ್ಟಿದ್ದೇನೆ, ಈಗ ಮತ್ತೆ ಸ್ವಾಮಿಜಿ ಮುಖಾಂತರ ಎರಡು ಮನೆ ನಿರ್ಮಿಸಿಕೊಡುವ ಹೊಣೆ ಹೊರುತ್ತೇನೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಘೋಷಣೆ ಮಾಡಿದರು.

ರೇಣುಕಾಚಾರ್ಯಗೆ ಪಟ್ಟು ಹಿಡಿದ ಶಾಮನೂರು ಶಿವಶಂಕರಪ್ಪ

ಇನ್ನೂ ಇತ್ತ ದೇಣಿಗೆ ತಿಳಿಸದೇ ಭಾಷಣ ಮುಗಿಸಿದ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯರಿಗೆ ಶಾಮನೂರು ಶಿವಶಂಕರಪ್ಪ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಇಲ್ಲಿಯೇ ಘೋಷಣೆ ಮಾಡು, ಕೊಟ್ಟು ಹೇಳು, ಸ್ವಾಮಿಜಿ ಕಾಲನ್ನು‌ ಮುಟ್ಟಿ ಹೇಳು ಎಂದು ಶಾಮನೂರು ಪಟ್ಟು ಹಿಡಿದು ಕೂತರು.

ಇದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ನಾವು ಈಗಾಗಲೇ ನಮ್ಮ ತಾಲೂಕಿನಿಂದ ಪರಿಹಾರ ಕೊಟ್ಟಿದ್ದೇವೆ ಎಂದರು. ಇಷ್ಟಕ್ಕೆ ಬಿಡದ ಶಾಮನೂರು, ನೀನು ಅಲ್ಲಿ ಕೊಟ್ಟಿರಬಹುದು, ನಿಮ್ಮ ಸಮಾಜದಿಂದ ಇಲ್ಲಿ ಪರಿಹಾರ ಸಂಗ್ರಹಿಸಲಾಗ್ತಿದೆ. ನೀನು ಕೊಡಲೇ ಬೇಕು ಎಂದು ಪಟ್ಟು ಹಿಡಿದು ಕೂತರು, ಕೊನೆಯಲ್ಲಿ ಶಾಮನೂರು ಪಟ್ಟುಗೆ ಸೋತ ರೇಣುಕಾಚಾರ್ಯ, ಸ್ವಾಮಿಜಿ ಕಾಲಿಗೆ ಬಿದ್ದು ದೇಣಿಗೆ ಕೊಡುವುದಾಗಿ ಹೇಳಿದರು. ಹಾಗೇ ಹೇಳುತ್ತಿದ್ದಂತೆ ಸ್ವಾಮಿಜಿಯವರೇ, ರೇಣುಕಾಚಾರ್ಯ ಹತ್ರ ಒಂದು ಕೋಟಿ ರೂಪಾಯಿ ವಸೂಲಿ ಮಾಡಿ ಎಂದು ಶಿವಶಂಕರಪ್ಪ ಹೇಳಿದರು.

Last Updated : Sep 11, 2019, 7:01 AM IST

ABOUT THE AUTHOR

...view details