ಕರ್ನಾಟಕ

karnataka

ETV Bharat / state

ಇಂಗ್ಲೆಂಡ್​​​ನಿಂದ ದಾವಣಗೆರೆಗೆ ಬಂದ ಏಳು ಜನರ ಕೋವಿಡ್ ವರದಿ ನೆಗೆಟಿವ್: ಜಿಲ್ಲಾಧಿಕಾರಿ ಮಾಹಿತಿ - ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ

ಇಂಗ್ಲೆಂಡಿನಿಂದ ದಾವಣಗೆರೆ ಜಿಲ್ಲೆಗೆ ಬಂದಿದ್ದವರ ಕೊರೊನಾ ವರದಿ ನೆಗೆಟಿವ್​ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

ಮಹಾಂತೇಶ್ ಬೀಳಗಿ
DC Mahantesh

By

Published : Dec 24, 2020, 9:38 AM IST

ದಾವಣಗೆರೆ: ಇಂಗ್ಲೆಂಡ್​​​ನಿಂದ ಜಿಲ್ಲೆಗೆ ಬಂದಿದ್ದ ಏಳು ಜನರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದೂರವಾಣಿ ಮೂಲಕ 'ಈಟಿವಿ ಭಾರತ'ಗೆ ಮಾಹಿತಿ ನೀಡಿದರು.

ಇಂಗ್ಲೆಂಡಿನಿಂದ ಬಂದಿದ್ದವರ ಸ್ಯಾಂಪಲ್​ಗಳನ್ನು ತೆಗೆದುಕೊಂಡು ಕೊರೊನಾ ಪರೀಕ್ಷೆ ನಡೆಸಲು ಲ್ಯಾಬ್​ಗೆ ಕಳುಹಿಸಿ ಕೊಡಲಾಗಿತ್ತು. ಅವರ ವರದಿ ಬಂದಿದ್ದು, ಆರು ಜನರ ಕೋವಿಡ್​ ವರದಿಯಲ್ಲಿ ನೆಗೆಟಿವ್​ ಬಂದಿದೆ. ಈಗಾಗಲೇ ಈ ಹಿಂದೆಯೇ ಓರ್ವ ವ್ಯಕ್ತಿಯ ವರದಿ ನೆಗೆಟಿವ್​ ಬಂದಿತ್ತು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಓದಿ: ಲಂಡನ್​​ನಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ : ಡಿಸಿ ಮಹಾಂತೇಶ್ ಬೀಳಗಿ

ಒಂದು ಕುಟುಂಬದಲ್ಲಿ ನಾಲ್ವರು ಹಾಗೂ ಮೂರು ಜನ ಬೇರೆ ಬೇರೆ ಕಡೆ ಇದ್ದು, ಇವರನ್ನು ಹೋಂ ಕ್ವಾರಂಟೈನ್​​​ನಲ್ಲಿ ಇಡಲಾಗಿದೆ. ವೈದ್ಯರ ತಂಡ ನಿರಂತರ ಇವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಸದ್ಯ ಆತಂಕ ಪಡುವ ಅಗತ್ಯವಿಲ್ಲ. ಮೇಲಾಗಿ ನಿತ್ಯ ವಿದೇಶದಿಂದ ರಾಜ್ಯಕ್ಕೆ ಬರುವ ಪಟ್ಟಿ ಲಭ್ಯವಾಗುತ್ತದೆ. ದಾವಣಗೆರೆಗೆ ಬರುವ ವಿದೇಶಿಯರ ಬಗ್ಗೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ABOUT THE AUTHOR

...view details