ಕರ್ನಾಟಕ

karnataka

ETV Bharat / state

ಎಚ್ಚರ.. ಎಚ್ಚರ.. ಆನ್​ಲೈನ್​ನಲ್ಲಿ ಹಣಗಳಿಸಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ - ದಾವಣಗೆರೆಯ ಸಿಇಎನ್ ಅಪರಾಧ ಪೊಲೀಸ್​ ಠಾಣೆ

7.69 Lakh fraud to a woman in online: ಸಾಮಾಜಿಕ ಜಾಲತಾಣವೊಂದರಲ್ಲಿ ಅಪರಿಚಿತ ವ್ಯಕ್ತಿಯ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು ಹಣಗಳಿಸಲು ಹೋಗಿ ತನ್ನ ಬಳಿ ಇದ್ದ 7 ಲಕ್ಷದ 69 ಸಾವಿರ ರೂ. ಕಳೆದುಕೊಂಡಿದ್ದಾರೆ.

online fraud
ವಂಚನೆ

By ETV Bharat Karnataka Team

Published : Nov 24, 2023, 3:45 PM IST

ದಾವಣಗೆರೆ:ಆನ್​ಲೈನ್​ನಲ್ಲಿ ಮಹಿಳೆಯೊಬ್ಬರು 7.69 ಲಕ್ಷ ಹಣ ಕಳೆದುಕೊಂಡಿರುವ ಘಟನೆ ದಾವಣಗೆರೆ ನಗರದ .ಬಿ. ಬಡಾವಣೆಯ ಕಿರ್ವಾಡಿ ಲೇಔಟ್‌ನಲ್ಲಿ ನಡೆದಿದೆ. ಸೋಷಿಯಲ್​ ಮೀಡಿಯಾ ಮುಖೇನ ಕೆಲ ವಿಡಿಯೋಗಳನ್ನು ಪ್ರೊಮೋಟ್​ ಮಾಡಿದರೆ ಸುಲಭವಾಗಿ ಮನೆಯಲ್ಲೇ ಕೂತು ಹಣಗಳಿಸಬಹುದು ಎಂಬುದಾಗಿ ನಂಬಿಸಿ ಮಹಿಳೆಗೆ ಬರೋಬ್ಬರಿ 7.69 ಲಕ್ಷ ರೂ. ವಂಚನೆ ಮಾಡಲಾಗಿದೆ. ದಾವಣಗೆರೆ ನಗರದ ಕೆಬಿ ಬಡಾವಣೆಯ ಕಿರ್ವಾಡಿ ಲೇಔಟ್​ನ ನಿವಾಸಿ ವಿದ್ಯಾ ವಂಚಕರಿಂದ ಹಣ ಕಳೆದುಕೊಂಡವರು.

ವಂಚನೆಗೊಳಗಾದ ವಿದ್ಯಾ ಅವರನ್ನು ಸಾಮಾಜಿಕ ಜಾಲತಾಣದ ಒಂದು ಆ್ಯಪ್​​ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ ಮೊದಲು ಪರಿಚಯಿಸಿಕೊಂಡಿದ್ದಾನೆ. ಬಳಿಕ ಅದರಲ್ಲೇ ವಿಡಿಯೋಗಳನ್ನು ಪ್ರೊಮೋಟ್ ಮಾಡಿದರೆ ಮನೆಯಲ್ಲೇ ಕೂತು ಹಣಗಳಿಸಬಹುದು ಎಂದು ನಂಬಿಸಿದ್ದಾನೆ. ನಂತರ ಕೆಲ ಟಾಸ್ಕ್​ಗಳನ್ನು ಪೂರೈಸಬೇಕು ಎಂದು ಹೇಳಿದ್ದಾನೆ.

ಈ ಅಪರಿಚಿತ ವ್ಯಕ್ತಿಯನ್ನು ನಂಬಿದ ವಿದ್ಯಾ ಅವರು ಟಾಸ್ಕ್​ಗಳನ್ನು ಪೂರೈಸುವ ನೆಪದಲ್ಲಿ ಹಂತ ಹಂತವಾಗಿ 7.69 ಲಕ್ಷ ಕಳೆದುಕೊಂಡಿದ್ದಾರೆ. ಬಳಿಕ ಖಾತೆಯಲ್ಲಿ ಹಣ ಹೋಗಿದ್ದು ತಿಳಿದ ವಿದ್ಯಾ ಅವರು ತಾವೇ ಮೋಸ ಹೋಗಿದ್ದೇನೆ ಎಂದು ತಿಳಿದು ದಾವಣಗೆರೆಯ ಸಿಇಎನ್ ಅಪರಾಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ‌

ಜಿಲ್ಲೆಯ ಪ್ರತ್ಯೇಕ ಪ್ರಕರಣ - ಕೊನೆಗೂ ಪುಂಡ ಮುಸಿಯಾ ಸೆರೆ, ಮಲೇಬೆನ್ನೂರುನ ಜನ ನಿರಾಳ:ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಕೆಲ ದಿನಗಳಿಂದ ಜನರಿಗೆ ಕಾಟ ಕೊಡುತ್ತಿದ್ದ ಮಂಗ( ಮುಶ್ಯಾ)ವನ್ನು ಪುರಸಭೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯವರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಲೆಬೆನ್ನೂರಿನ ಬೀರಲಿಂಗೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ದಾಂಗುಂಡಿ ಇಟ್ಟಿದ್ದ ಮಂಗ( ಮುಶ್ಯಾ)ವನ್ನು ಬೋನಿನಲ್ಲಿ ಸೆರೆಹಿಡಿಯಲಾಯಿತು.‌

ಶುಕ್ರವಾರ ನಸುಕಿನಲ್ಲಿ ಕಾರ್ಯಚರಣೆಗೆ ಇಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಲೇಜಿನ ಕಿಟಕಿಯೊಂದರ ಬಳಿ ಕಾಲು ಹೊರಹಾಕಿ ಕುಳಿತಿದ್ದ ಮುಸಿಯಾವನ್ನು ಕಟ್ಟಿಹಾಕಿ ಬೋನಿಗೆ ತಳ್ಳಿ ಸೆರೆ ಹಿಡಿದಿದ್ದಾರೆ. ಈ ಮುಸಿಯಾ ಮಲೇಬೆನ್ನೂರಿ‌ಲ್ಲಿ ದಾರಿ ಹೋಕರ ಮೇಲೆ ಎರಗುತ್ತಿದ್ದು, ಒಮ್ಮೆ ಬಾಲಕನ ತಲೆಗೆ ಕಚ್ಚಿ ಗಾಯಗೊಳಿಸಿತ್ತು. ಇದರಿಂದ ಮುಂಜಾಗ್ರತೆ ವಹಿಸಿದ ಅರಣ್ಯ ಇಲಾಖೆ ಹಾಗು ಪುರಸಭೆ ಸಿಬ್ಬಂದಿ ಕೊನೆಗೂ ಮುಶ್ಯಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಮಗುವಿಗೆ ಕೋಳಿ ಕುಕ್ಕಿದ ಆರೋಪ: ಶಾಲೆಗೆ ಬೀಗ ಹಾಕಿ ಪೋಷಕರಿಂದ ಪ್ರತಿಭಟನೆ

ಇತರೆ ಪ್ರಕರಣ: ಬಾಲಕಿಗೆ ಕುಕ್ಕಿದ ಕೋಳಿ, ಶಾಲೆಗೆ ಬೀಗ : ಚಾಮರಾಜನಗರದಲ್ಲಿ ಗುರುವಾರ ಕೋಳಿಯೊಂದು ಬಾಲಕಿಗೆ ಕುಕ್ಕಿ ಗಾಯಗೊಳಿಸಿರುವುದರಿಂದ ಆಕ್ರೋಶಗೊಂಡು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಘಟನೆ ನಡೆದ ನಿನ್ನೆಯೆ ಪ್ರತಿಭಟನೆ ನಡೆಸಿ ಮಕ್ಕಳನ್ನು ಮನೆಗೆ ಕರೆದೊಯ್ದ ಪಾಲಕರು ಇಂದು ಕೂಡ ಶಾಲೆಗೆ ಕಳುಹಿಸದೇ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ABOUT THE AUTHOR

...view details