ಕರ್ನಾಟಕ

karnataka

ETV Bharat / state

ಯಾವ ನಿಷೇಧಕ್ಕೂ ಡೋಂಟ್​ ಕೇರ್​​: ದಾವಣಗೆರೆಯಲ್ಲಿ ರಾಜಾರೋಷವಾಗಿ ಮಾಂಸ ಮಾರಾಟ - Davanagere covid rules

ಮಹಾವೀರ ಜಯಂತಿ ಹಿನ್ನೆಲೆ ಮಹಾನಗರ ಪಾಲಿಕೆ ಇಂದು ಕುರಿ, ಕೋಳಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ಜನ ನಿಯಮ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.

Selling meat in Davanagere by violating covid rules
ದಾವಣಗೆರೆಯಲ್ಲಿ ರಾಜಾರೋಷವಾಗಿ ಮಾಂಸ ಮಾರಾಟ

By

Published : Apr 25, 2021, 1:29 PM IST

ದಾವಣಗೆರೆ: ಮಾಂಸ ಮಾರಾಟಕ್ಕೆ ಇಂದು ನಿಷೇಧವಿದ್ದರೂ ಕೂಡ ದಾವಣಗೆರೆಯಲ್ಲಿ ಅದೇಶ ಉಲ್ಲಂಘನೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಕೊಳ್ಳುವವರ ಸಂಖ್ಯೆ ಕೂಡ ಕಡಿಮೆಯೇನಿಲ್ಲ.

ದಾವಣಗೆರೆಯಲ್ಲಿ ರಾಜಾರೋಷವಾಗಿ ಮಾಂಸ ಮಾರಾಟ

ಇಂದು ಮಹಾವೀರ ಜಯಂತಿ ಹಿನ್ನೆಲೆ ಮಹಾನಗರ ಪಾಲಿಕೆ ಕುರಿ, ಕೋಳಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅದ್ರೂ ಕೂಡ ಮಾಂಸ ಮಾರಾಟಗಾರರು ಕದ್ದುಮುಚ್ಚಿ ಮಾಂಸ ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿತು. ಜನರು ಕೂಡ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ:ವೀಕೆಂಡ್​ ಕರ್ಫ್ಯೂ... ಶಿವಮೊಗ್ಗ ಜನತೆಯಿಂದ ಉತ್ತಮ ಪ್ರತಿಕ್ರಿಯೆ

ದಾವಣಗೆರೆಯ ವಸಂತ ರಸ್ತೆಯಲ್ಲಿನ ಕುರಿ ಮಾಂಸ ಮಾರುಕಟ್ಟೆಯಲ್ಲಿ ನಿಯಮ ಉಲ್ಲಂಘನೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಅದರೆ ಅದೇಶ ಹೊರಡಿಸಿದ ಪಾಲಿಕೆ‌ ಅಧಿಕಾರಿಗಳು ಕಣ್ಣು‌ ಮುಚ್ಚಿ ಕುಳಿತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದಲ್ಲದೆ ನಿಟ್ಟುವಳ್ಳಿ ಸೇರಿದಂತೆ ಹಲವು ಕಡೆ ಅಕ್ರಮವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅದರಲ್ಲೂ ದುಪ್ಪಟ್ಟು ಹಣ ನೀಡಿದರಿಗೆ ಮಾತ್ರ ಮಾಂಸ ತಂದುಕೊಡುವ ದೃಶ್ಯ ಸಾಮಾನ್ಯವಾಗಿತ್ತು.

ABOUT THE AUTHOR

...view details