ಕರ್ನಾಟಕ

karnataka

ETV Bharat / state

ಅಕ್ರಮವಾಗಿ ವ್ಯಾಕ್ಸಿನ್ ಮಾರಾಟ: ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು - Selling Covid vaccine illegally in davangere

ಹರಿಹರ ತಾಲೂಕಿನ ಕೊಕ್ಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದಾವಣಗೆರೆ ಕಡೆ ಅಕ್ರಮವಾಗಿ ಲಸಿಕೆ ಮಾರಾಟ ಮಾಡಲು ಹೊರಟಿದ್ದ ಸಿಬ್ಬಂದಿಯನ್ನು ಗ್ರಾಮಸ್ಥರು ಹಿಂಬಾಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

Selling Covid vaccine illegally in davangere
ಅಕ್ರಮವಾಗಿ ಲಸಿಕೆ ಮಾರಾಟ

By

Published : Aug 18, 2021, 1:16 PM IST

Updated : Aug 18, 2021, 2:24 PM IST

ದಾವಣಗೆರೆ: ಅಕ್ರಮವಾಗಿ ಕೊರೊನಾ ವ್ಯಾಕ್ಸಿನ್ ಮಾರಾಟಕ್ಕೆ ಮುಂದಾದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ಜರುಗಿದೆ.

ಹರಿಹರ ತಾಲೂಕಿನ ಕೊಕ್ಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ದಾವಣಗೆರೆ ಕಡೆ ಲಸಿಕೆ ಮಾರಾಟ ಮಾಡಲು ಹೊರಟಿದ್ದ ಆಸ್ಪತ್ರೆಯ ನರ್ಸ್ ರೂಪಾ ಮತ್ತು ಸಿಬ್ಬಂದಿ ಲಕ್ಷ್ಮಣ್ ಅನ್ನು ಗ್ರಾಮಸ್ಥರು ಹಿಂಬಾಲಿಸಿ ತರಾಟೆಗೆ ತೆಗೆದುಕೊಂಡರು.

ಅಕ್ರಮವಾಗಿ ವ್ಯಾಕ್ಸಿನ್ ಮಾರಾಟ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಜನ

ನಾವು ನಿತ್ಯ ಆರೋಗ್ಯ ಕೇಂದ್ರಕ್ಕೆ ವ್ಯಾಕ್ಸಿನ್ ಕೇಳಲು ಬರುತ್ತೇವೆ, ನೀವು ಲಸಿಕೆ ಕದ್ದು, ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದರು. ನಂತರ ಸಿಬ್ಬಂದಿಯನ್ನು ಮರಳಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಕದ್ದು ವ್ಯಾಕ್ಸಿನ್ ತೆಗೆದುಕೊಂಡು ಹೋಗುತ್ತಿದ್ದರು ಎಂದು ಬೆಳಕಿಗೆ ಬಂದಿದೆ.

Last Updated : Aug 18, 2021, 2:24 PM IST

ABOUT THE AUTHOR

...view details