ಕರ್ನಾಟಕ

karnataka

ETV Bharat / state

ದಾವಣಗೆರೆ: ಶಾಲಾ ಜಾಗ ಒತ್ತುವರಿ ತೆರವುಗೊಳಿಸಿ ತಹಶೀಲ್ದಾರ್​ ಖಡಕ್ ಕ್ರಮ - ಶಾಲೆ ಜಾಗ ಬಿಡಿಸಿಕೊಟ್ಟ ತಹಶೀಲ್ದಾರ್

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ಒಡೆರಹಳ್ಳಿ ಗ್ರಾಮದಲ್ಲಿನ ಒತ್ತುವರಿಯಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಎಕರೆ 20 ಗುಂಟೆ ಜಾಗವನ್ನು ತಹಶೀಲ್ದಾರ್ ಸಂತೋಷ್ ಬಿಡಿಸಿಕೊಟ್ಟಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

By

Published : Dec 8, 2022, 9:53 PM IST

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ಒಡೆರಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಎಕರೆ 20 ಗುಂಟೆ ಜಾಗವನ್ನು ಒತ್ತುವರಿ ಮಾಡಿ ಕಬಳಿಸಲು ಯತ್ನಿಸಿದ್ದ 14 ಜನರಿಗೆ ತಹಶೀಲ್ದಾರ್ ಸಂತೋಷ್ ಬಿಸಿ ಮುಟ್ಟಿಸಿದ್ದಾರೆ.

ಜಗಳೂರು ತಹಶೀಲ್ದಾರ್​ ಸಂತೋಷ್​ ಅವರಿಗೆ ಸರ್ಕಾರಿ ಭೂಮಿ ಕಬಳಿಸಿದ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ ಕೂಡಲೇ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ಮಾಡಿಯೇ ಬಿಟ್ಟಿದ್ದಾರೆ. ಇದರಿಂದ ಗ್ರಾಮದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಆದ್ರೆ ತಹಶೀಲ್ದಾರ್​​ ತಾವು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಒಂದೇ ದಿನದಲ್ಲಿ 14 ಜನ ಭೂಗಳ್ಳರನ್ನು ಎದುರುಹಾಕಿಕೊಂಡು ತೆರವು ಮಾಡಿದ್ದಾರೆ. ತೆರವು ಮಾಡಿದ ಜಾಗದಿಂದ ಶಾಲಾ ಮಕ್ಕಳಿಗೆ ಆಟದ ಮೈದಾನ ಸಿಕ್ಕಂತಾಗಿದೆ.

ತಹಶೀಲ್ದಾರ್ ಸಂತೋಷ್ ಅವರು ಮಾತನಾಡಿದರು

ಸರ್ಕಾರಿ ಶಾಲೆಯ ಜಮೀನು ಕಬಳಿಸಿ ಮನೆಗಳನ್ನು ಕೊಟ್ಟಿಕೊಂಡಿದ್ದರು. ಇದೀಗ ಶಾಲೆಗೆ ಹೊಂದಿಕೊಂಡಿದ್ದ ಕೆಲ ಕಟ್ಟಡಗಳನ್ನು ಕೆಡವಿ ಹಾಕಲಾಗಿದೆ. ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಕೇಳಲು ಹೋದವರಿಗೆ ಬೆದರಿಕೆ ಹಾಕುವುದು, ಶಾಲಾ ಮಕ್ಕಳು ಆಟವಾಡುವ ಸ್ಥಳದಲ್ಲಿ ತಂತಿ ಬೇಲಿ ಹಾಕಿ ಅದರೊಳಗೆ ಮೆಕ್ಕೆಜೋಳ ಬೆಳೆದಿದ್ದರು. ನಿಮ್ಮ ಬಳಿ ದಾಖಲೆ ಇದ್ರೆ ಕೊಡಿ ಎಂದು ಕೇಳಿದ್ರೆ ಗ್ರಾಮದಲ್ಲಿದ್ದ ಮನೆಯ ಸರ್ವೇನಂಬರ್ ಅನ್ನು ಅತಿಕ್ರಮಿತ ಸ್ಥಳಕ್ಕೆ ತೋರಿಸಿ ಚಾಲಾಕಿತನಕ್ಕೆ ಮುಂದಾಗಿದ್ದರು. ಇದನ್ನೆಲ್ಲ ಗಮನಿಸಿದ ತಹಶೀಲ್ದಾರ್​, ನಾಲ್ಕು ಜೆಸಿಬಿಗಳ ಮೂಲಕ ಸ್ವಚ್ಛ ಮಾಡಿ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಇದಕ್ಕೆ ಗ್ರಾಮ ಪಂಚಾಯತ್ ಸಹ ಸಹಕಾರ ನೀಡಿತ್ತು.

ಶಾಲೆ ಜಾಗ ಬಿಡಿಸಿಕೊಟ್ಟ ತಹಶೀಲ್ದಾರ್: ನಾಲ್ಕು ದಶಕಗಳ ಹಿಂದೆ ಗ್ರಾಮದ ಪ್ರಮುಖರೊಬ್ಬರು ಈ ಜಮೀನನ್ನು ಶಾಲೆಗಾಗಿ ದಾನ ನೀಡಿದ್ದರು. ಜಮೀನಿನಲ್ಲಿ ಒಂದು ಬಾವಿ ಸಹ ಇತ್ತು. ಇದು ಮಕ್ಕಳಿಗೆ ಉಪಯೋಗವಾಗಲಿದೆ ಎಂಬ ಕಾರಣಕ್ಕೆ ನಿರ್ಮಿಸಲಾಗಿತ್ತು. ಸರ್ಕಾರಕ್ಕೆ ದಾನ ನೀಡಿದ್ದ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದರು. ಇದೀಗ ತಹಶೀಲ್ದಾರ್​ ಸಂತೋಷ ಹಾಗೂ ಇಓ ಚಂದ್ರಶೇಖರ್​ ಸೇರಿದಂತೆ ಹಿರಿಯ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸರ್ಕಾರಿ ಭೂಮಿ ಉಳಿಸಿ ಶಾಲೆಗೆ ಬಿಡಿಸಿಕೊಟ್ಟು ಮಕ್ಕಳು ಆಟವಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ:ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿತಾ ಬಿಬಿಎಂಪಿ?

ABOUT THE AUTHOR

...view details