ದಾವಣಗೆರೆ:ದಾವಣಗೆರೆ ಜಿಲ್ಲೆಯ ಮಾಯಕೊಂಡ ಮತ ಕ್ಷೇತ್ರ 1978 ರಲ್ಲಿ ವಿಧಾನಸಭ ಕ್ಷೇತ್ರವಾಗಿ ಪರಿಗಣಿಸಲಾಗಿದೆ. ಅಲ್ಲದೆ, 2008 ರಲ್ಲಿ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿರುವ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ ವಾಗೀಶ್ ಸ್ವಾಮಿ ಎಸ್ಸಿ ಸರ್ಟಿಫಿಕೇಟ್ ಪಡೆದು ಬಿಜೆಪಿಯಿಂದ ಸ್ಪರ್ಧಿಸಲು ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಓಡಾಡುತ್ತಿದ್ದಾರೆ ಎನ್ನಲಾಗ್ತಿದೆ.
ಯಾರೂ ಕೂಡ ಬಿಜೆಪಿ ಆಕಾಂಕ್ಷಿಗಳು ಎಂದು ಕಾರ್ಯಕ್ರಮ ಮಾಡುವಂತಿಲ್ಲ. ಅಲ್ಲದೇ ಎಸ್ಸಿ ಮೀಸಲು ಕ್ಷೇತ್ರವಾದ ಹಿನ್ನೆಲೆ ಎಸ್ಸಿ ಸಮುದಾಯಕ್ಕೆ ಮಾತ್ರ ಟಿಕೇಟ್ ನೀಡಲಾಗುವುದು, ವಾಗೀಶ್ ಸ್ವಾಮಿಗೆ ಟಿಕೇಟ್ ಕೊಡುವುದಿಲ್ಲ. ಅವರೊಬ್ಬರೇ ಅಲ್ಲ, ಯಾರಿಗೂ ಕೂಡ ಬಿ ಪಾರ್ಮ್ ಕೊಡೋದಿಲ್ಲ. ಪಕ್ಷ ತೀರ್ಮಾನ ತೆಗೆದುಕೊಂಡು ಎಸ್ಸಿ ಸಮುದಾಯದ ಅಭ್ಯರ್ಥಿಗೆ ಟಿಕೇಟ್ ಕೊಡುತ್ತೇವೆ. ಏನಾದರೂ ಟಿಕೇಟ್ ಬೇಕು ಎಂದರೆ ಪಕ್ಷವನ್ನು ತೊರೆದು ಪಕ್ಷೇತರವಾಗಿ ನಿಲ್ಲಲಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.