ಕರ್ನಾಟಕ

karnataka

ETV Bharat / state

ಹೊನ್ನಾಳಿಯಲ್ಲಿ ರಾರಾಜಿಸುತ್ತಿರುವ ಸಾವರ್ಕರ್, ಬಾಲಗಂಗಾಧರ್ ತಿಲಕ್ ಫ್ಲೆಕ್ಸ್ - ಹಿಂದೂ ಮಹಾಸಭಾ ಗೌರಿ ಗಣೇಶ್ ಸೇವಾ ಸಮಿತಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿಂದೂ ಮಹಾಸಭಾ ಗೌರಿ ಗಣೇಶ್ ಸೇವಾ ಸಮಿತಿಯಿಂದ ಸಾವರ್ಕರ್ ಹಾಗೂ ಬಾಲಗಂಗಾಧರ್ ತಿಲಕ್ ಫ್ಲೆಕ್ಸ್​​​​​ ಅಳವಡಿಸಲಾಗಿದೆ.

Savarkar Flex at Davangere
ಹೊನ್ನಾಳಿಯಲ್ಲಿ ರಾರಾಜಿಸುತ್ತಿರುವ ಸಾವರ್ಕರ್, ಬಾಲಗಂಗಾಧರ್ ತಿಲಕ್ ಫ್ಲೆಕ್ಸ್

By

Published : Aug 23, 2022, 1:19 PM IST

ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ್ ಹಬ್ಬಕ್ಕೂ ಮುನ್ನವೇ ಸಾವರ್ಕರ್ ಹಾಗೂ ಬಾಲಗಂಗಾಧರ್ ತಿಲಕ್​​ ಇರುವ ಫೋಟೋಗಳು ಫ್ಲೆಕ್ಸ್​​​ಗಳಲ್ಲಿ ರಾರಾಜಿಸುತ್ತಿವೆ. ನಗರದ ಹಿಂದೂ ಮಹಾಸಭಾ ಗೌರಿ ಗಣೇಶ್ ಸೇವಾ ಸಮಿತಿಯಿಂದ ಹೊನ್ನಾಳಿ ಪಟ್ಟಣದ ತುಂಬ ಇವು​ಗಳನ್ನು ಅಳವಡಿಸಲಾಗಿದೆ.

ಹೊನ್ನಾಳಿಯಲ್ಲಿ ರಾರಾಜಿಸುತ್ತಿರುವ ಸಾವರ್ಕರ್, ಬಾಲಗಂಗಾಧರ್ ತಿಲಕ್ ಫ್ಲೆಕ್ಸ್

ಪ್ರತಿಯೊಂದು ಫ್ಲೆಕ್ಸ್​​ನಲ್ಲಿ ಸಾವರ್ಕರ್, ಬಾಲಗಂಗಾಧರ್ ತಿಲಕ್ ಫೋಟೋ ಕಾಣುತ್ತಿದೆ. ಬ್ಯಾನರ್​​ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಕೂಡ ಫ್ಲೆಕ್ಸ್​​ ಹಾಕಲಾಗಿದೆ. ಯಾರು ಏನೇ ವಿರೋಧ ಮಾಡಿದರೂ ನಾವು ಅದ್ಧೂರಿ ಗಣೇಶೋತ್ಸವ ಮಾಡೇ ಮಾಡ್ತೀವಿ ಎಂದು ಪಟ್ಟು ಹಿಡಿದಿರುವ ಇಲ್ಲಿನ ಗಣೇಶ ಸಮಿತಿಯವರು, ಪಟ್ಟಣದ ಪ್ರಮುಖ ವೃತ್ತಗಳಲ್ಲಿ 10 ಬ್ಯಾನರ್ ಆಳವಡಿಸಿದ್ದಾರೆ. ಇನ್ನೂ 40 ಬ್ಯಾನರ್​​ಗಳನ್ನು ಹೊನ್ನಾಳಿ ಪಟ್ಟಣದಾದ್ಯಂತ ಅಳವಡಿಕೆ ಮಾಡಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಏರಿಯಾಗಳಲ್ಲಿ, ನಗರ ಪ್ರದೇಶಗಳಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸುತ್ತೇವೆ.. ಕಾಂಗ್ರೆಸ್ ನಾಯಕರಿಗೆ ರೇಣುಕಾಚಾರ್ಯ ಸವಾಲು

ABOUT THE AUTHOR

...view details